alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮುಸುಕುಧಾರಿ ಪ್ರಭಾಸ್ ‘ಭಾಗಮತಿ’ ಭೇಟಿಯ ದೃಶ್ಯ

‘ಬಾಹುಬಲಿ’ ಪ್ರಭಾಸ್ ಮತ್ತು ‘ದೇವಸೇನಾ’ ಖ್ಯಾತಿಯ ಅನುಷ್ಕಾಶೆಟ್ಟಿ ಅವರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಆಗಾಗ ಹರಿದಾಡಿ ಮರೆಯಾಗುತ್ತವೆ. ಇದೇ ವರ್ಷ ಪ್ರಭಾಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದ್ದರೂ, ಹುಡುಗಿ ಅನುಷ್ಕಾ ಎನ್ನುವುದು ಖಚಿತವಾಗಿಲ್ಲ.

‘ಬಾಹುಬಲಿ -2’ ಬಳಿಕ ಪ್ರಭಾಸ್ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಶೆಟ್ಟಿ ‘ಭಾಗಮತಿ’ ಪೂರ್ಣಗೊಳಿಸಿದ್ದಾರೆ. ಅನುಷ್ಕಾ ‘ಭಾಗಮತಿ’ ಲುಕ್ ಹಲಚಲ್ ಎಬ್ಬಿಸಿದ್ದು, ಪ್ರಭಾಸ್, ನಿರ್ದೇಶಕ ಎಸ್.ಎಸ್. ರಾಜಮೌಳಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಸಾಹೋ’ ಸೆಟ್ ಗೆ ಅನುಷ್ಕಾ ಭೇಟಿ ನೀಡಿದ್ದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಆದರೆ, ಇದಕ್ಕಿಂತ ಮೊದಲೇ ಪ್ರಭಾಸ್ ‘ಭಾಗಮತಿ’ ಸೆಟ್ ಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಇದೇ ವಾರ ‘ಭಾಗಮತಿ’ ಚಿತ್ರ ತೆರೆಗೆ ಬರ್ತಿದ್ದು, ಚಿತ್ರ ವಿಡಿಯೋ ಸಾಂಗ್ ಬಿಡುಗಡೆ ಮಾಡಲಾಗಿದೆ.

ಹಾಡಿನ ಚಿತ್ರೀಕಣದ ಸಂದರ್ಭದಲ್ಲಿ ಪ್ರಭಾಸ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೆಟ್ ಗೆ ಭೇಟಿ ನೀಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಪ್ರಭಾಸ್ ಮತ್ತು ಅನುಷ್ಕಾ ಅವರ ಮದುವೆ ಬಗ್ಗೆ ಮತ್ತೆ ಮಾತನಾಡತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...