alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನ ಈ ನಟಿಗೆ ವಿಡಿಯೋ ಕಾಲ್ ಮಾಡ್ತಾನೆ ಬಾಹುಬಲಿ…!

ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿಯನ್ನು ತೆರೆ ಮೇಲೆ ಜನರು ಮೆಚ್ಚಿಕೊಂಡಿದ್ದಾರೆ. ತೆರೆ ಹಿಂದೆ ಕೂಡ ಇವ್ರಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿರುತ್ತವೆ. ಇಬ್ಬರು ಮದುವೆಯಾಗ್ತಾರೆ ಎಂಬ ಸುದ್ದಿಯಿಂದ ಹಿಡಿದು ಇಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎನ್ನುವವರೆಗೆ ಎಲ್ಲವೂ ಆಗಾಗ ಸುದ್ದಿಯಾಗ್ತಿರುತ್ತದೆ.

ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯ ಇಬ್ಬರ ಬ್ರೇಕ್ ಅಪ್ ಮಾತ್ರ ಆಗಿಲ್ಲ. ಇಬ್ಬರೂ ಒಟ್ಟಿಗಿದ್ದಾರೆ. ಮೊದಲಿಗಿಂತ ಮತ್ತಷ್ಟು ಹತ್ತಿರವಾಗಿದ್ದಾರೆ ಎಂದು ಮೂಲಗಳು ಹೇಳ್ತಿವೆ. ಪ್ರಭಾಸ್ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಆದ್ರೂ ಅನುಷ್ಕಾರನ್ನು ಮಾತ್ರ ಮರೆತಿಲ್ಲ.

ಮೂಲಗಳ ಪ್ರಕಾರ ಸಾಹೋ ಚಿತ್ರೀಕರಣದ ಸೆಟ್ ನಲ್ಲಿಯೇ ಪ್ರಭಾಸ್ ಅನುಷ್ಕಾರಿಗೆ ವಿಡಿಯೋ ಕಾಲ್ ಮಾಡಿದ್ದಾರಂತೆ. ಅನುಷ್ಕಾ ಕೂಡ ಒಬ್ಬ ಗರ್ಲ್ ಫ್ರೆಂಡ್ ಏನು ಮಾಡಬೇಕೋ ಅದನ್ನೆಲ್ಲ ಮಾಡ್ತಿದ್ದಾರಂತೆ. ಪ್ರಭಾಸ್ ಯಾರ ಜೊತೆ ಏನು ಮಾಡ್ತಿದ್ದಾರೆ ಎಂಬ ಮಾಹಿತಿ ಅನುಷ್ಕಾ ಬಳಿ ಇರುತ್ತದೆಯಂತೆ.

ಸಾಹೋ ಚಿತ್ರದ ನಟಿ ಶ್ರದ್ಧಾ ಹಾಗೂ ಪ್ರಭಾಸ್ ನಡುವೆ ಬೆಳೆಯುತ್ತಿರುವ ಸ್ನೇಹವನ್ನು ಅನುಷ್ಕಾ ಸಹಿಸುತ್ತಿಲ್ಲವಂತೆ. ಇದೇ ಕಾರಣಕ್ಕೆ ಸೆಟ್ ಗೆ ಬಂದು ಪ್ರಭಾಸ್ ಗೆ ಸರ್ಪ್ರೈಸ್ ನೀಡಿದ್ದರಂತೆ. ಪ್ರಭಾಸ್ ರನ್ನು ತುಂಬಾ ಇಷ್ಟಪಡುವ ಅನುಷ್ಕಾ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...