alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಪ್ರಭಾಸ್ –ಅನುಷ್ಕಾ ಶೆಟ್ಟಿ ರಹಸ್ಯ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಹೆಚ್ಚು ಚರ್ಚೆಯಾಗಿದ್ದು ಎರಡು ಪ್ರಮುಖ ಕಾರಣಕ್ಕೆ. ಒಂದು ಚಿತ್ರದ ಯಶಸ್ಸು ಮತ್ತು ಗಳಿಕೆ. ಮತ್ತೊಂದು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಮತ್ತು ಅನುಷ್ಕಾ ಅವರ ಕುರಿತಾಗಿ.

ಹೌದು, ‘ಬಾಹುಬಲಿ -2’ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಅವರ ಕುರಿತಾಗಿ ಭಾರೀ ಸುದ್ದಿಯಾಗಿದೆ. ಅವರು ಲವ್ ಮಾಡ್ತಾರೆ, ಮದುವೆ ಆಗ್ತಾರೆ. ಪ್ರಭಾಸ್ ಮುಂದಿನ ಚಿತ್ರದಲ್ಲಿಯೂ ಅನುಷ್ಕಾ ನಾಯಕಿಯಾಗ್ತಾರೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. ಅವುಗಳಿಗೆಲ್ಲಾ ಇಬ್ಬರೂ ತೆರೆ ಎಳೆದಿದ್ದರು. ಆದರೂ ಗಾಸಿಪ್ ಗಳಿಗೇನು ಬರವಿಲ್ಲ.

ಪ್ರಭಾಸ್ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಟ್ರೇಲರ್ ಮೂಲಕವೇ ಹಲ್ ಚಲ್ ಎಬ್ಬಿಸಿರುವ ‘ಭಾಗಮತಿ’ಯನ್ನು ಅನುಷ್ಕಾ ಪೂರ್ಣಗೊಳಿಸಿದ್ದಾರೆ. ‘ಭಾಗಮತಿ’ ಲುಕ್ ಗೆ ಪ್ರಭಾಸ್ ಮೆಚ್ಚುಗೆಯ ಮಾತುಗಳನ್ನಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು.

ಈ ನಡುವೆ ಅನುಷ್ಕಾ ಬಿಡುವು ಮಾಡಿಕೊಂಡು ‘ಸಾಹೋ’ ಸೆಟ್ ಗೆ ಭೇಟಿ ನೀಡಿದ್ದಾರೆ. ಹೈದರಾಬಾದ್ ನಲ್ಲಿ ‘ಸಾಹೋ’ ಸೆಟ್ ಗೆ ಭೇಟಿ ನೀಡಿದ್ದ ಅವರ ಫೋಟೋ ವೈರಲ್ ಆಗಿದೆ. ಚಿತ್ರತಂಡದೊಂದಿಗೆ ಅನುಷ್ಕಾ ಸೆಲ್ಫಿಗೆ ಪೋಸ್ ನೀಡಿದ್ದಾರೆ.

‘ಸಾಹೋ’ ಸೆಟ್ ಗೆ ಅನುಷ್ಕಾ ಭೇಟಿ ನೀಡಿದ್ದು, ಸೆಲ್ಫಿ ಫೋಟೋಗೆ ಪೋಸ್ ಕೊಟ್ಟಿರುವ ವಿಚಾರ ಹಾಟ್ ಟಾಪಿಕ್ ಆಗಿದೆ. ಪ್ರಭಾಸ್ ಲವ್ ಸ್ಟೋರಿಗೆ ಇದು ಪುಷ್ಠಿ ನೀಡುವಂತಿದೆ. ಇಬ್ಬರೂ ಹಲವು ಸಲ ನಮ್ಮದು ಗೆಳೆತನ ಮಾತ್ರ, ಏನೂ ಇಲ್ಲ ಎಂದು ಹೇಳಿದ್ದರೂ ಈ ಪ್ರಕರಣದಿಂದ ಅವರ ಲವ್ ಸ್ಟೋರಿಗೆ ರೆಕ್ಕೆಪುಕ್ಕ ಮೂಡಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...