alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ವೆ ನಂತರ ಮತ್ತೆ ಬಣ್ಣ ಹಚ್ತಿದ್ದಾರೆ ರಾಧಿಕಾ….

radhika

ನಟಿ ರಾಧಿಕಾ ಪಂಡಿತ್ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಮದುವೆ ನಂತರ ಇದು ಅವರ ಮೊದಲನೇ ಬರ್ತಡೇ, ಹಾಗಾಗಿ ಸಖತ್ ಸ್ಪೆಷಲ್ ಎನ್ನುತ್ತಿದ್ದಾರೆ. ದೂರದ ಊರುಗಳಿಂದ ತಮಗೆ ಶುಭಾಶಯ ಹೇಳಲು ಬಂದ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸೋದರ ಜೊತೆಗೆ ಫ್ಯಾಮಿಲಿ ಟೈಂ ಕೂಡ ರಾಧಿಕಾಗೆ ಇಂಪಾರ್ಟೆಂಟ್ ಅಂತೆ.

ಪತಿ ಯಶ್ ಹಾಗೂ ಕುಟುಂಬದವರ ಜೊತೆಗೆ ರಾಧಿಕಾ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಮದುವೆ ನಂತರ ರಾಧಿಕಾ ಮತ್ತೆ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಮದುವೆ ಆದ ಮೇಲೂ ಚಿತ್ರರಂಗದಲ್ಲಿ ಮುಂದುವರಿಯಬೇಕು ಅನ್ನೋದು ಅವರ ಆಸೆಯಂತೆ, ಅದಕ್ಕೆ ತಕ್ಕಂತೆ ಅವಕಾಶಗಳು ಕೂಡ ಸಿಗ್ತಾ ಇರೋದ್ರಿಂದ ಸಂತಸವಾಗಿದೆ ಅಂತಾ ತಿಳಿಸಿದ್ದಾರೆ. 2 ತಿಂಗಳ ಬ್ರೇಕ್ ನಂತರ ಮತ್ತೆ ಬಣ್ಣ ಹಚ್ತಾ ಇರೋ ರಾಧಿಕಾ, ಹೊಸದೊಂದು ಚಿತ್ರಕ್ಕಾಗಿ ಸ್ಕ್ರಿಪ್ಟ್ ಓದುತ್ತಿದ್ದಾರಂತೆ. ಎಲ್ಲಾ ಓಕೆ ಆದ್ರೆ ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...