alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿಯ ಅಭಿಮಾನಿ ಮಾಡಿರುವುದೇನು ಗೊತ್ತಾ?

ಅಭಿಮಾನಿಗಳ ಅಭಿಮಾನಕ್ಕೆ ಸ್ಟಾರ್ ನಟರು ಕ್ಲೀನ್ ಬೋಲ್ಡ್ ಆಗಿರೋದು ಗೊತ್ತಿರುವ ವಿಚಾರ. ಇನ್ನು ಕೆಲವು ನಟರು, ನಿರ್ದೇಶಕರು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಈಗ ಬಾಲಿವುಡ್ನಲ್ಲಿ ತಮ್ಮ ನಟನೆಯ ಮೂಲಕ ಸದ್ದು ಮಾಡುತ್ತಿರುವ ಇನ್ನೋರ್ವ ನಟಿ ಪೂಜಾ ಹೆಗಡೆ. ತೆಲಗು ಹಾಗೂ ಹಿಂದಿಯ ಚಿತ್ರಗಳಲ್ಲಿ ನಟಿಸಿ ಪೂಜಾ ಸೈ ಎನಿಸಿಕೊಂಡಿದ್ದಾರೆ. ಈ ನಟಿಯ ನಟನೆಗೆ ಮನಸೋತ ಅಭಿಮಾನಿ, ಪೂಜಾರಿಂದ ಪ್ರೀತಿ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಪೂಜಾ ಅವರ ಅಭಿಮಾನಿ, ಎಲ್ಲರಿಗಿಂತಲೂ ಭಿನ್ನವಾಗಿ ಅಭಿಮಾನ ವ್ಯಕ್ತಪಡಿಸಬೇಕು ಎಂದು ಯೋಚನೆ ಮಾಡಿದರು. ಹೀಗಾಗಿ ತಮ್ಮ ಬಲಗೈನಲ್ಲಿ ಪೂಜಾ ಹೆಗಡೆ ಹೆಸರನ್ನು ಟ್ಯಾಟು ಹಾಕಿಸಿಕೊಂಡಿದ್ದಾರೆ. ಅಲ್ಲದೆ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ಪೂಜಾ, ನಿಮ್ಮ ಪ್ರಿತಿ ಹಾಗೂ ವಿಶ್ವಾಸ ನನಗೆ ಕೆಟ್ಟ ದಿನಗಳನ್ನು ಮೆಟ್ಟಿ ನಿಲ್ಲಲು ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...