alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಹೊರಬಂದ ಪೂಜಾಗಾಂಧಿ ಅಯ್ಯಪ್ಪ ಜೊತೆ ಟೀ ಕುಡಿದ್ರಾ?

pooja , ayyappa

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋನಲ್ಲಿ ಸ್ಪರ್ಧಿಯಾಗಿದ್ದ ನಟಿ ಪೂಜಾಗಾಂಧಿ ಅವರು ಈಗ ಏನು ಮಾಡುತ್ತಿದ್ದಾರೆ ಎಂಬ ಕುತೂಹಲವೇ? ಹಾಗಾದರೆ ಮುಂದೆ ಓದಿ, ಪೂಜಾಗಾಂಧಿ ಶೋನಿಂದ ಹೊರಬಂದ ನಂತರ ಸಿನಿಮಾಗಳಲ್ಲಿ ಅಭಿನಯಿಸಲು ಸಿದ್ಧತೆ ನಡೆಸಿದ್ದಾರೆ.

ಪೂಜಾಗಾಂಧಿ ಅಭಿನಯದ ಭರ್ಜರಿ ಹಿಟ್ ಆಗಿದ್ದ ‘ದಂಡುಪಾಳ್ಯ’ ಎರಡನೇ ಭಾಗಕ್ಕೆ ಪೂಜಾಗಾಂಧಿ ತಯಾರಿ ನಡೆಸಿದ್ದಾರೆ. ದಂಡುಪಾಳ್ಯದಲ್ಲಿ ಪೂಜಾಗಾಂಧಿ ಮನೋಜ್ಞ ಅಭಿನಯ ನೀಡಿದ್ದರು. ಆಕೆಯ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದರು. ಎರಡನೇ ಭಾಗದಲ್ಲೂ ಪೂಜಾ ಕಮಾಲ್ ಮಾಡುವ ನಿರೀಕ್ಷೆ ಇದೆ. ‘ಬಿಗ್ ಬಾಸ್’ ಮನೆಯಲ್ಲಿ ಅಯ್ಯಪ್ಪ ಅವರೊಂದಿಗೆ ಅನ್ಯೋನ್ಯವಾಗಿದ್ದ ಪೂಜಾಗಾಂಧಿ ಅವರಿಗೆ ಮನೆಯಿಂದ ಹೊರ ಬಂದ ಬಳಿಕ ಅವರೊಂದಿಗೆ ಟೀ ಕುಡಿಯುವ ಬಯಕೆ ಇತ್ತೆನ್ನಲಾಗಿದೆ.

‘ಬಿಗ್ ಬಾಸ್’ ವೇದಿಕೆಯಲ್ಲಿಯೇ ನಿರೂಪಕ ಕಿಚ್ಚ ಸುದೀಪ್ ಹಲವು ಬಾರಿ ಇದನ್ನು ಪ್ರಸ್ತಾಪಿಸಿ, ಅಯ್ಯಪ್ಪ ಟೀ ಪಾರ್ಟಿಗೆ ಕಾಯುತ್ತಿದ್ದಾರೆ ಎಂದೆಲ್ಲಾ ರೇಗಿಸಿದ್ದರು. ಇದೀಗ ಪೂಜಾಗಾಂಧಿ ಟೀ ಕುಡಿದರೋ ಇಲ್ಲವೋ ಗೊತ್ತಿಲ್ಲ. ಆದರೆ, ‘ದಂಡುಪಾಳ್ಯ-2’ನಲ್ಲಿ ಮತ್ತೊಮ್ಮೆ ಖತರ್ನಾಕ್ ಕಳ್ಳಿಯಾಗಿ ಕಮಾಲ್ ಮಾಡುವುದಂತೂ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...