alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಭ್ ರನ್ನೇ ಖಂಡಿಸಿದ್ದ ಪೂಜಾ ಭಟ್ ವಿರುದ್ಧ ಅಭಿಮಾನಿಗಳು ಗರಂ

ಕಥುವಾ ಅತ್ಯಾಚಾರ ಪ್ರಕರಣದ ಬಗ್ಗೆ ದೇಶಾದ್ಯಂತ ಹಲವು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಕಥುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣಗಳ ಬಗ್ಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರತಿಕ್ರಿಯೆ ನೀಡಿರಲಿಲ್ಲ.

ಬಿಗ್ ಬಿ, ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಬ್ರಾಂಡ್ ಅಂಬಾಸಿಡರ್. ಹಾಗಾಗಿ ಪತ್ರಕರ್ತರು ಅತ್ಯಾಚಾರ ಪ್ರಕರಣಗಳ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದ್ದರು. ನನಗೆ ಅದರ ಬಗ್ಗೆ ಮಾತನಾಡಲು ಸಹ ಅಸಹ್ಯವಾಗುತ್ತದೆ, ಆ ಪ್ರಕರಣಗಳನ್ನು ಮತ್ತೆ ಕೆದಕಬೇಡಿ. ನಿಜಕ್ಕೂ ಅವು ಭಯಂಕರವಾದ ಘಟನೆಗಳು ಎಂದಿದ್ದರು ಅಮಿತಾಭ್.

ಇದನ್ನು ನಟಿ ಪೂಜಾ ಭಟ್ ಖಂಡಿಸಿದ್ದರು. ಪಿಂಕ್ ಚಿತ್ರದಲ್ಲಿ ಸಂತ್ರಸ್ಥೆಯ ಪರವಾಗಿ ಹೋರಾಡುವ ವಕೀಲನ ಪಾತ್ರ ಮಾಡಿದ್ದನ್ನು ಅಮಿತಾಭ್ ಗೆ ನೆನಪಿಸಿದ್ದರು. ಇದರಿಂದ ಕೆರಳಿದ ಬಿಗ್ ಬಿ ಅಭಿಮಾನಿಗಳು ಪೂಜಾ ಭಟ್ ಳನ್ನು ಮದ್ಯವ್ಯಸನಿ ಅಂತಾ ಟ್ರೋಲ್ ಮಾಡಿದ್ದಾರೆ.

ಅದಕ್ಕೂ ಸಹ ಪೂಜಾ ತಿರುಗೇಟು ನೀಡಿದ್ದಾಳೆ. ಕಳೆದ ವರ್ಷವಷ್ಟೆ ತಾವು ಮದ್ಯಕ್ಕೆ ದಾಸರಾಗಿದ್ದು, ಅದನ್ನು ಬಿಡಲು ಪ್ರಯತ್ನಿಸುತ್ತಿರುವುದಾಗಿ ಖುದ್ದು ಪೂಜಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...