alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಗೆ ದರ್ಶನ್, ಬಿ.ಜೆ.ಪಿ.ಗೆ ಸುದೀಪ್ ಕರೆತರಲು ಪ್ರಯತ್ನ..?

ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಕಾರ್ಯೋನ್ಮುಖವಾಗಿರುವ ರಾಜಕೀಯ ಪಕ್ಷಗಳು ಸ್ಟಾರ್ ನಟರನ್ನು ಕರೆತರಲು ಪ್ರಯತ್ನ ನಡೆಸಿವೆ.

ರಿಯಲ್ ಸ್ಟಾರ್ ಉಪೇಂದ್ರ ಹೊಸ ರೀತಿಯ ರಾಜಕಾರಣವನ್ನು ಪರಿಚಯಿಸಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆ.

ದರ್ಶನ್ ಕಾಂಗ್ರೆಸ್ ಗೆ ಬಂದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ. ಇದರೊಂದಿಗೆ ದರ್ಶನ್ ಅವರನ್ನು ಮೈಸೂರು –ಕೊಡಗು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ಇದೆ. ಆದರೆ, ದರ್ಶನ್ ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.

ಇನ್ನು ದರ್ಶನ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನಗಳು ನಡೆದಿರುವ ಬೆನ್ನಲ್ಲೇ ಬಿ.ಜೆ.ಪಿ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಕರೆತರಲು ಪ್ರಯತ್ನಿಸಿದೆ.

ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಸಂಸದ ಶ್ರೀರಾಮುಲು ಅವರಿಗೆ ಸುದೀಪ್ ಅವರೊಂದಿಗೆ ಮಾತನಾಡಲು ತಿಳಿಸಲಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರುವ ಯೋಚನೆಯಲ್ಲಿದೆ. ಅಲ್ಲದೇ, ರಾಯಚೂರು ಲೋಕಸಭೆ ಕ್ಷೇತ್ರದಿಂದ ಸುದೀಪ್ ಅವರನ್ನು ಕಣಕ್ಕಿಳಿಸಲು ಚಿಂತಿಸಿದೆ ಎನ್ನಲಾಗಿದೆ.

ರಾಜಕೀಯ ಮತ್ತು ಚಿತ್ರರಂಗ ಬೇರೆ ಕ್ಷೇತ್ರಗಳಾದರೂ ಎರಡಕ್ಕೂ ಬಿಡಿಸಲಾರದ ನಂಟು. ಸಿನಿಮಾ ಕ್ಷೇತ್ರದಲ್ಲಿದ್ದವರು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಸುದೀಪ್ ಮತ್ತು ದರ್ಶನ್ ಬಿಗ್ ಸ್ಟಾರ್ ಗಳಾಗಿದ್ದು, ಇಬ್ಬರೂ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...