alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಪೊಲೀಸ್ ಕೈಗೆ ಸಿಕ್ಕಿಲ್ಲ ಓಂಪುರಿ ಮೊಬೈಲ್

om-puri_fzyuc1q

ಹಿರಿಯ ನಟ ಓಂಪುರಿ ಸಾವಿನ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫಾರೆನ್ಸಿಕ್ ವರದಿಗಾಗಿ ಪೊಲೀಸರು ಕಾಯ್ತಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಅದ್ರಲ್ಲಿ ಸ್ಪಷ್ಟವಾಗಲಿದ್ದು, ತನಿಖೆಗೆ ಈ ವರದಿ ಸಹಕಾರಿಯಾಗಲಿದೆ.

ಇದೇ ವೇಳೆ ಓಂಪುರಿ ಆಪ್ತರು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ಪೊಲೀಸರು ಪಡೆಯುತ್ತಿದ್ದಾರೆ. ಇನ್ನೂ ಅನೇಕರ ಹೇಳಿಕೆ ಪಡೆಯುವುದು ಬಾಕಿ ಇದೆ. ಈ ನಡುವೆ ಪೊಲೀಸ್ ಕೈಗೆ ಇನ್ನೂ ಓಂಪುರಿ ಮೊಬೈಲ್ ಸಿಕ್ಕಿಲ್ಲ. ತನಿಖೆಯಲ್ಲಿ ಮೊಬೈಲ್ ಮಹತ್ವದ ಪಾತ್ರ ವಹಿಸಲಿದೆ.

ಓಂಪುರಿ ಪತ್ನಿ ನಂದಿತಾ ಬಳಿ ಮೊಬೈಲ್ ಇದೆ ಎನ್ನಲಾಗ್ತಾ ಇದೆ. ಸದ್ಯ ನಂದಿತಾ ಅಂತ್ಯಸಂಸ್ಕಾರದ ವಿಧಿವಿಧಾನದಲ್ಲಿ ಬ್ಯುಸಿ ಇದ್ದು, ಸರಿಯಾದ ಸಮಯ ನೋಡಿ ಪೊಲೀಸರು ಓಂಪುರಿ ಮೊಬೈಲ್ ಪಡೆಯಲಿದ್ದಾರೆ. ಸಾವಿಗೂ ಮುನ್ನ ಓಂಪುರಿ ಯಾರಿಗಾದ್ರೂ ಕರೆ ಮಾಡಿದ್ದರಾ? ಮಾಡಿದ್ದರೆ ಯಾರು ಎಂಬುದನ್ನು ತಿಳಿಯುವುದು ಪೊಲೀಸರ ಉದ್ದೇಶವಾಗಿದೆ.

ಓಂಪುರಿ ಅತಿಯಾಗಿ ಕುಡಿದಿದ್ದರು ಎಂಬುದು ಶವಪರೀಕ್ಷೆ ವೇಳೆ ತಿಳಿದುಬಂದಿದೆ. ಅತಿಯಾದ ಮದ್ಯ ಸೇವನೆಯಿಂದ ಹೃದಯಾಘಾತವಾಗಿರಬಹುದೆಂದು ಅಂದಾಜಿಸಲಾಗಿದೆ. ಜನವರಿ 6 ರಂದು 66 ವರ್ಷದ ಓಂಪುರಿ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...