alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾವರಣವಾಯ್ತು ನಟಿಯ ಅಸಲಿ ಮುಖ

srivani-17

ಹೈದರಾಬಾದ್: ಇತ್ತೀಚೆಗೆ ಹಲವಾರು ನಟಿಯರು ವಿವಾದಕ್ಕೆ ಸಿಲುಕಿದ ಘಟನೆಗಳು ನಡೆದಿವೆ. ಈ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ಅಣ್ಣನ ಆಸ್ತಿ ಕಬಳಿಸಲು ನಟಿಯೊಬ್ಬಳು ಅತ್ತಿಗೆಗೆ ಕಿರುಕುಳ ನೀಡಿದ ಘಟನೆ ನಡೆದಿದೆ.

ತೆಲುಗು ಕಿರುತೆರೆ ವಾಹಿನಿಯಲ್ಲಿ ನಟಿ ಹಾಗೂ ನಿರೂಪಕಿಯಾಗಿರುವ ಶ್ರೀವಾಣಿ ಅವರು, ತಮ್ಮ ಅಣ್ಣನ ಆಸ್ತಿಯನ್ನು ಕಬಳಿಸಲು ಅತ್ತಿಗೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀವಾಣಿ ಅವರ ತಂದೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯ ಮಗ ಕರ್ನಾಟಕದ ಚಿಂಚೋಳಿ ತಾಲ್ಲೂಕಿನ ಯುವತಿಯನ್ನು ಮದುವೆಯಾಗಿದ್ದು, ಹಳ್ಳಿಯಲ್ಲೇ ವಾಸವಾಗಿದ್ದ. ಶ್ರೀವಾಣಿ ಎರಡನೇ ಪತ್ನಿಯ ಮಗಳಾಗಿದ್ದು, ತಂದೆಯೊಂದಿಗೆ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.

ಸಹೋದರನಿಗೆ ಮಕ್ಕಳಾಗಿಲ್ಲವೆಂದು ಶ್ರೀವಾಣಿ ಅತ್ತಿಗೆಗೆ ಕಿರುಕುಳ ನೀಡುತ್ತಿದ್ದರು. ಇತ್ತೀಚೆಗೆ ಸಹೋದರ ಮೃತಪಟ್ಟಿದ್ದು, ಆತನ ಆಸ್ತಿ ಕಬಳಿಸಲು ಮುಂದಾದ ಶ್ರೀವಾಣಿ ಅತ್ತಿಗೆಯನ್ನು ಮನೆ ಬಿಟ್ಟು ಕಳಿಸಿದ್ದಾರೆ. ಅಣ್ಣನ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಪೊಲೀಸರಿಗೂ ಶ್ರೀವಾಣಿ ವಿರುದ್ಧ ಅತ್ತಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...