alex Certify
ಕನ್ನಡ ದುನಿಯಾ       Mobile App
       

Kannada Duniya

100ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಹಿನ್ನೆಲೆ ಗಾಯಕಿ ಸ್ಥಿತಿ ಈಗ ಹೇಗಿದೆ ಗೊತ್ತಾ?

download

ಕೆಲ ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ಬಣ್ಣದ ಲೋಕದಲ್ಲಿ ಮಿಂಚಿದ್ದ ಕೆಲವರು ಹೀನಾಯ ಸ್ಥಿತಿಯಲ್ಲಿದ್ದಾರೆ. ಅವರಿಗೆ ಬಣ್ಣದ ಲೋಕ, ಹೆಸರು ನೀಡಿದ್ದು ಬಿಟ್ಟರೆ ಮತ್ತೇನನ್ನೂ ನೀಡಿಲ್ಲ. ಕೊನೆಗಾಲದಲ್ಲಿ ನೆಮ್ಮದಿಯಿಂದಿರಬೇಕಾಗಿದ್ದ ಜೀವಗಳು ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಅವರಲ್ಲಿ ಹಿನ್ನೆಲೆ ಗಾಯಕಿ ಮುಬಾರಕ್ ಬೇಗಂ ಕೂಡ ಒಬ್ಬರು.

ತಮ್ಮ ಕಂಠ ಸಿರಿಯಿಂದಲೇ ಅಭಿಮಾನಿಗಳ ಮನಗೆದ್ದವರು ಮುಬಾರಕ್ ಬೇಗಂ. 1950-60ರ ದಶಕದಲ್ಲಿ ಬಾಲಿವುಡ್ ನ ಪ್ರಮುಖ ಹಿನ್ನೆಲೆ ಗಾಯಕಿ. ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಮುಬಾರಕ್ ಬೇಗಂ ಪರಿಸ್ಥಿತಿ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ.

ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಿದ್ದ ಮುಬಾರಕ್ ಬೇಗಂಗೆ ವಾಸಿಸಲು ಒಂದು ಮನೆಯಿಲ್ಲ. ಚಿಕಿತ್ಸೆಗೆ ಹಣವಿಲ್ಲ. ಮುಬಾರಕ್ ಬೇಗಂಗಿದ್ದ ಒಬ್ಬ ಮಗ ಅನಾರೋಗ್ಯದಿಂದ ಹಿಂದಿನ ವರ್ಷ ಸಾವನ್ನಪ್ಪಿದ್ದಾರೆ. ಮಗನ ಮಗನೊಬ್ಬ ಆಟೋ ಚಲಾಯಿಸಿ ಮನೆ ನಿಭಾಯಿಸುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...