alex Certify
ಕನ್ನಡ ದುನಿಯಾ       Mobile App
       

Kannada Duniya

‘ಅದನ್ನೂ’ ಬ್ಯಾನ್ ಮಾಡಿದ್ರಾ ಅಂತಿದ್ದಾಳೆ ಪೂನಂ ಪಾಂಡೆ…?

ಪಬ್ಲಿಸಿಟಿ ಗಿಮಿಕ್ ಗಾಗಿ ಏನು ಬೇಕಾದ್ರು ಮಾಡ್ತೀನಿ ಅನ್ನೋರ ಪೈಕಿ ಭಾರತದ ಹಾಟ್ ಬೆಡಗಿ ಪೂನಂ ಪಾಂಡೆ ಯಾವತ್ತಿಗೂ ಮೊದಲ ಸ್ಥಾನದಲ್ಲಿ ನಿಲ್ತಾಳೆ. ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿರೋ ವಿಚಾರ ನಿಮಗೆಲ್ಲಾ ಗೊತ್ತೇ ಇದೆಯಲ್ವಾ. ಈಗ ಆ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪೂನಂ ಪಾಂಡೆ ಮಾಡಿರೋ ಟ್ವೀಟ್ ನೆಟ್ಟಿಗರನ್ನ ಅಳಬೇಕೋ ನಗಬೇಕೋ ಅಂತ ಗೊತ್ತಾಗದ ಹಾಗೆ ಮಾಡಿಬಿಟ್ಟಿದೆ.

ಪ್ಲಾಸ್ಟಿಕ್ ಬ್ಯಾನ್ ವಿಚಾರವನ್ನೇ ಮುಂದಿಟ್ಟುಕೊಂಡು ಪೂನಂ ಟ್ವೀಟ್ ಒಂದನ್ನ ಮಾಡಿದ್ದಾಳೆ. ಪ್ಲಾಸ್ಟಿಕ್ ಬ್ಯಾನ್ ಆಯ್ತಾ…? ಹಾಗಾದ್ರೆ ಕಾಂಡೋಮ್ ಕೂಡ ಅದರಲ್ಲಿ ಸೇರಿದ್ಯಾ ಅಂತ ಟ್ವೀಟ್ ಮಾಡಿದ್ದಾಳೆ. ಪೂನಂಳ ಟ್ವೀಟ್ ನೋಡಿದ ನೆಟಿಜನ್ಸ್ ತರಹೇವಾರಿ ಪ್ರತಿಕ್ತಿಯೆಗಳನ್ನ ನೀಡ್ತಿದ್ದಾರೆ. ಕೆಲವರಂತೂ ಆಕೆಯ ಶೈಲಿಯಲ್ಲೇ ಅವಳ ಕಾಲೆಳೆದಿದ್ದಾರೆ.

ಇನ್ನು ಹಲವರು ಸಾಮಾನ್ಯ ನಾಗರಿಕರಿಗೆ ಇರಬೇಕಾದ ಕನಿಷ್ಟ ಸಾಮಾಜಿಕ ಪ್ರಜ್ಞೆಯೂ ಇಲ್ಲವೇ ನಿನಗೆ ಅಂತ ಪೂನಂಗೆ ಟ್ವೀಟ್ ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಅಲ್ವೇ ಹೇಳೋದು ಅಜ್ಜಿಗೆ ಅರಿವೆ ಚಿಂತೆ ಆದ್ರೆ ಮೊಮ್ಮಗಳಿಗೆ ಮದುವೆಯ ಚಿಂತೆ ಅಂತ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...