alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದರ್ಶನ ಆರಂಭಗೊಂಡ 70 ನಿಮಿಷಗಳಲ್ಲೇ ಅಪ್ ಲೋಡ್ ಆಗಿತ್ತು ‘ಕಬಾಲಿ’

kabali-movie-759ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪೈರೇಟೆಡ್ ಕಾಪಿ, ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಆಗದಂತೆ ಏನೇ ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ.

ಶುಕ್ರವಾರ ಬಿಡುಗಡೆಗೊಂಡ ಕಬಾಲಿಯ ಮೊದಲ ಪ್ರದರ್ಶನ ಬೆಳಿಗ್ಗೆ 4 ಗಂಟೆಗೆಲ್ಲಾ ಆರಂಭವಾಗಿದ್ದು, ಅದಾದ 70 ನಿಮಿಷಗಳಲ್ಲೆ vimeo ಎಂಬ ವೆಬ್ ಸೈಟ್ ನಲ್ಲಿ ಸಂಪೂರ್ಣ ಚಿತ್ರ ಅಪ್ ಲೋಡ್ ಆಗಿದೆ. ಪೀಟರ್ ಎಂಬವರ ಹೆಸರಿನಲ್ಲಿ ಈ ಪೈರೇಟೆಡ್ ಕಾಪಿ ಅಪ್ ಲೋಡ್ ಆಗಿದ್ದು, ಅಪ್ ಲೋಡ್ ಆಗುವ ಸ್ವಲ್ಪ ಮುಂಚೆ ಆ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ.

ಅಪ್ ಲೋಡ್ ಆದ ಕೆಲ ಹೊತ್ತಿನಲ್ಲೇ ಇದು ವಾಟ್ಸಾಪ್ ಸೇರಿದಂತೆ ಹಲವು ತಾಣಗಳಲ್ಲಿ ಹರಿದಾಡಿದ್ದು, 12 ಗಂಟೆಗಳ ಅವಧಿಯಲ್ಲಿ 2 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಪೈರೇಟೆಟ್ ಕಾಪಿಯಲ್ಲಿ ಚಿತ್ರದ 24 ನಿಮಿಷ ಅವಧಿ ಕಟ್ ಆಗಿದ್ದರೂ ಬಹುತೇಕರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಯಾವುದೇ ಒಂದು ಚಿತ್ರ ಬಿಡುಗಡೆಗೊಂಡ 24 ಗಂಟೆಗಳ ಬಳಿಕ ಪೈರೇಟೆಡ್ ಕಾಪಿ, ವೆಬ್ ಸೈಟ್ ಗಳಲ್ಲಿ ಕಂಡು ಬರುತ್ತಿತ್ತಾದರೂ ‘ಕಬಾಲಿ’ ಮಾತ್ರ ಪ್ರದರ್ಶನ ಆರಂಭಗೊಂಡ 70 ನಿಮಿಷಗಳಲ್ಲೇ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಚಿತ್ರ ಮೊದಲೇ ಬಹಿರಂಗವಾಗಿತ್ತು ಎಂಬ ವದಂತಿಗೆ ಇದು ಪುಷ್ಟಿ ನೀಡಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...