alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ಲುಕ್ ನಲ್ಲಿ ಶಾರುಕ್ ಪುತ್ರಿ

ಬಾಲಿವುಡ್ ಬಾದ್ ಷಾ ಶಾರೂಕ್ ರಂತೆ ಅವರ ಮಕ್ಕಳು ಕೂಡಾ ತುಂಬಾ ಚಾರ್ಮಿಂಗ್ ಆಗಿ ಇದ್ದಾರೆ. ಅದ್ರಲ್ಲೂ ಮಗಳು ಸುಹಾನಾ ಎವರ್ ಗ್ರೀನ್ ಬ್ಯೂಟಿ. ಅವಳ ಸೌಂದರ್ಯಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ.

ಸುಹಾನಾ ಬ್ಯೂಟಿ ಬಗ್ಗೆ ಇಷ್ಟೆಲ್ಲಾ ಚರ್ಚೆಗೆ ಕಾರಣ ತಾಯಿ ಗೌರಿ ಖಾನ್ ಇತ್ತೀಚೆಗೆ ಮಗಳ ಒಂದು ಫೋಟೋವನ್ನು ಶೇರ್ ಮಾಡಿದ್ದು. ಇದ್ರಲ್ಲಿ ಸುಹಾನಾ ಸ್ಟೈಲಿಶ್ ಲುಕ್, ಸುಂದರ ಕೆನ್ನೆಗಳು, ಆಕೆಯ ಮುಖದಲ್ಲಿ ಇರುವ ಆತ್ಮವಿಶ್ವಾಸ ಎದ್ದು ಕಾಣುತ್ತೆ.

ಸುಹಾನಾಳನ್ನ ನೋಡಿದ್ರೆ ಮುಂದೊಂದು ದಿನ ಬಾಲಿವುಡ್ ನ ದೊಡ್ಡ ಹೀರೊಯಿನ್ ಪಟ್ಟಿಯಲ್ಲಿ ಸೇರಬಹುದು ಅನ್ನಿಸುತ್ತೆ. ಗೌರಿ ಖಾನ್ ಈ ಫೋಟೋ ಹಾಕಲು ಕಾರಣ ಆಕೆಯ ಹುಟ್ಟು ಹಬ್ಬ. ಸುಹಾನಾ ಈಗ 18 ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ.

ಆದ್ರೆ ಕೆಲವರು ಹೇಳೋ ಪ್ರಕಾರ ಸುಹಾನಾ ನಾಚಿಕೆ ಸ್ವಭಾವದ ಹುಡುಗಿ. ದಿವಾ ಮ್ಯಾಗಜಿನ್ ನ ಫ್ರಂಟ್ ಪೇಜ್ ಗಾಗಿ ಆಕೆಯನ್ನು ಬದಲಾಯಿಸಲಾಗ್ತಿದೆ ಅಂತಾ ಮಾತನಾಡಿಕೊಳ್ತಿದ್ದಾರೆ. ವರದಿ ಪ್ರಕಾರ ಕೆಲ ತಿಂಗಳಲ್ಲೇ ನಿಯತಕಾಲಿಕೆಯ ಫ್ರಂಟ್ ಪೇಜ್ ನಲ್ಲಿ ಶಾರುಕ್ ಪುತ್ರಿ ಸುಹಾನಾಳ ಫೋಟೋ ಮುದ್ರಣವಾಗುತ್ತಂತೆ.

ಅಪ್ಪ ಸ್ಟಾರ್.  ಹೀಗಾಗಿ ಮಗಳಿಗೂ ಕೂಡಾ ಗ್ಲಾಮರಸ್ ಲೈಫ್ ಸ್ಟೈಲ್ ನ್ನೇ ನೀಡಲು ಇಷ್ಟಪಡ್ತಿದ್ದಾರೆ. ಇನ್ನು ಸುಹಾನ ಗೆಳೆಯರು ಚಿತ್ರೋದ್ಯಮ ಹಾಗೂ ದೊಡ್ಡ ದೊಡ್ಡ ಉದ್ಯಮಿಗಳ ಮಕ್ಕಳೇ ಆಗಿದ್ದಾರೆ.

ಇಷ್ಟೆಲ್ಲಾ ಗ್ಲಾಮರಸ್ ಆಗಿರೋ ಸುಹಾನಳ ಇತ್ತೀಚಿನ ಫೋಟೋ ಕ್ಲಿಕ್ ಗಳನ್ನು ನೋಡಿದ್ರೆ, ಅತಿ ಶೀಘ್ರದಲ್ಲೇ ಬಾಲಿವುಡ್ ನಲ್ಲಿ ತಮ್ಮ ಡೆಬ್ಯೂಟ್ ಚಿತ್ರಕ್ಕೆ ರೆಡಿಯಾಗ್ತಿದ್ದಾರೆ ಅನ್ನಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...