alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಪು ದೇದೇ ಥೋಡಾ ಕ್ಯಾಶ್’ ಎಂದ ಡಿಂಚಕ್ ಪೂಜಾಗೆ ಸಂಕಷ್ಟ

ಯಾವುದೇ ರಾಗ, ತಾಳವಿಲ್ಲದಿದ್ದರೂ, ತನ್ನದೇ ಸ್ಟೈಲ್ ನಲ್ಲಿ ಹಾಡುವ ಮೂಲಕ, ಯು ಟ್ಯೂಬ್ನಲ್ಲಿ ಹಲ್ ಚಲ್ ಎಬ್ಬಿಸಿದ್ದ ಡಿಂಚಕ್ ಪೂಜಾ ವಿವಾದಗಳಿಗೂ ಖ್ಯಾತಿ.

ಜುಲೈನಲ್ಲಿ ಡಿಂಚಕ್ ಪೂಜಾ ಹೊರ ತಂದಿದ್ದ ಹೊಸ ವಿಡಿಯೋ ‘ಬಾಪು ದೇದೇ ಥೋಡಾ ಕ್ಯಾಶ್’ ಭಾರೀ ಜನರನ್ನು ಸೆಳೆದಿದೆ. ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದಾರೆ.

ಹಾಡಿನಲ್ಲಿ ಹಣವನ್ನು ಪಡೆದುಕೊಂಡು ಬಟ್ಟೆ, ಚಿನ್ನ, ಕಾರ್ ಹೀಗೆ ಬೇಕಾದ್ದನ್ನೆಲ್ಲಾ ಖರೀದಿಸಿ ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗಿದೆ. ಜೊತೆಗೆ ನೋಟುಗಳನ್ನು ನಿರ್ಲಕ್ಷ್ಯದಿಂದ ಎಸೆಯಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಡಿಂಚಕ್ ಪೂಜಾ ವಿರುದ್ಧ ಕೆಲವರು ಐ.ಟಿ. ಇಲಾಖೆಗೆ ದೂರು ನೀಡಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿಯೂ ಡಿಂಚಕ್ ಪೂಜಾಳ ‘ಬಾಪು ದೇದೇ ಥೋಡಾ ಕ್ಯಾಶ್’ ಹಾಡಿನ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...