alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಗಳಿಕೆಯಲ್ಲಿ ಅನುಷ್ಕಾಳನ್ನು ಹಿಂದಿಕ್ಕಿದ ಕೊಹ್ಲಿ

ದೇಶದ ಯುವ ಸೆಲೆಬ್ರಿಟಿ ಜೋಡಿಗಳಲ್ಲೊಂದಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರ ನಡುವಿನ ಹಣ ಗಳಿಕೆ ವಿಚಾರದಲ್ಲಿ ಕೊಹ್ಲಿ ಭಾರೀ ಅಂತರದಿಂದ ಮುಂದಿದ್ದಾರೆ. ಫೋರ್ಬ್ಸ್ ಪತ್ರಿಕೆಯು ಸಿದ್ಧಪಡಿಸಿರುವ ಭಾರತದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿ ನಂ.2 ಸ್ಥಾನ ಪಡೆದಿದ್ದರೆ, ಅನುಷ್ಕಾ ಶರ್ಮಾ 16ನೇ ಸ್ಥಾನ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಅವರ ವಾರ್ಷಿಕ ಗಳಿಕೆ 228.09 ಕೋಟಿ ರೂ. ಆಗಿದ್ದರೆ, ಅನುಷ್ಕಾ ಅವರ ಗಳಿಕೆ 45.3 ಕೋಟಿ ರೂ. ಆಗಿದೆ. ಅಂದರೆ ಪತ್ನಿಯ ಆಸ್ತಿಗಿಂತ ಐದು ಪಟ್ಟು ಹೆಚ್ಚಿದೆ ಕೊಹ್ಲಿ ಆಸ್ತಿ. ಕೊಹ್ಲಿ ವಿಶ್ವದಲ್ಲೇ ನಂ.1 ಬ್ಯಾಟ್ಸ್ ಮನ್ ಆಗಿದ್ದು, ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಆಡಿ, ಜಿಯೋನಿ, ಟಿಸಾಟ್, ಎಂಆರ್‌ಎಫ್ ಇತ್ಯಾದಿ ಪ್ರಮುಖ ಬ್ರಾಂಡ್‌ಗಳ ರಾಯಭಾರಿಯೂ ಆಗಿದ್ದಾರೆ.

ಈ ಪಟ್ಟಿಯಲ್ಲಿ ಇನ್ನೊಂದು ಆಸಕ್ತಿಕರ ಸಂಗತಿ ಎಂದರೆ, ಮೂರನೇ ಬಾರಿಗೆ ಸಲ್ಮಾನ್ ನಂ.1 ಸ್ಥಾನ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಅಭಿಮಾನಿಗಳ ಪಾಲಿಗಿನ್ನೂ ಸೆಲೆಬ್ರಿಟಿಯೇ. ಅವರು ಟಾಪ್ 10 ಸ್ಥಾನದಲ್ಲೇ ಇದ್ದಾರೆ. ಅವರ ಗಳಿಕೆ 80 ಕೋಟಿ ರೂ.ನಷ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...