alex Certify
ಕನ್ನಡ ದುನಿಯಾ       Mobile App
       

Kannada Duniya

‘ರಣವಿಕ್ರಮ’ ನಿರ್ದೇಶಕ ಪವನ್ –ಅಪೇಕ್ಷಾ ನಿಶ್ಚಿತಾರ್ಥ

ಇತ್ತೀಚೆಗಷ್ಟೇ ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್, ಸುರಭಿ ಅವರೊಂದಿಗೆ ಬಳ್ಳಾರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮತ್ತೊಬ್ಬ ನಿರ್ದೇಶಕರ ನಿಶ್ಚಿತಾರ್ಥ ನೆರವೇರಿದೆ.

‘ರಣವಿಕ್ರಮ’ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಅವರ ನಿಶ್ಚಿತಾರ್ಥ ಬಾಗಲಕೋಟೆಯಲ್ಲಿ ನೆರವೇರಿದೆ. ‘ಗೋವಿಂದಾಯ ನಮಃ’, ‘ಗೂಗ್ಲಿ’, ‘ರಣವಿಕ್ರಮ’ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ ಮತ್ತು ಅಪೇಕ್ಷಾ ಅವರ ಮದುವೆಗೆ ಎರಡೂ ಕುಟುಂಬಗಳು ಒಪ್ಪಿದ್ದು, ನಿನ್ನೆ ಕುಟುಂಬದವರ ಪರಿಚಯ ಕಾರ್ಯಕ್ರಮ ನಡೆದಿದೆ. ಪವನ್ ಹಾಗೂ ಅಪೇಕ್ಷಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಪವನ್ ನಿರ್ದೇಶನದ ಚಿತ್ರಗಳ ಹಾಡುಗಳಿಗೆ ಯುವಕರು ನೃತ್ಯ ಪ್ರದರ್ಶಿಸಿದ್ದಾರೆ.

ಇಂದು ನಿಶ್ಚಿತಾರ್ಥ ನೆರವೇರಿದ್ದು, ಉಂಗುರ ಬದಲಿಸಿಕೊಂಡಿದ್ದಾರೆ. ಕುಟುಂಬದವರು, ಆಪ್ತರು ಪಾಲ್ಗೊಂಡು ಶುಭಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...