alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿಯ ನಿಶ್ಚಿತಾರ್ಥಕ್ಕೆ ಶುಭ ಕೋರಿದ ನಟ ಪವನ್ ಕಲ್ಯಾಣ್

ಖ್ಯಾತ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ರೇಣು ಅವರ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗೆ ನಡೆದಿದ್ದು, ಇದಕ್ಕೆ ಪವನ್ ಕಲ್ಯಾಣ್ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

ನಿಶ್ಚಿತಾರ್ಥ ಸಮಾರಂಭದಲ್ಲಿ ರೇಣು ಮಕ್ಕಳಾದ ಅಕಿರಾ ನಂದನ್ ಹಾಗೂ ಆಧ್ಯಾ ಸಹ ಭಾಗವಹಿಸಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ರೇಣು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ಮೊದಲಿಗೆ ನಂದಿನಿ ಅವರನ್ನು ವಿವಾಹವಾಗಿದ್ದು, ಅವರಿಗೆ ವಿಚ್ಛೇದನ ನೀಡಿದ ಬಳಿಕ 2007 ರಲ್ಲಿ ರೇಣು ಜೊತೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. 2014ರಲ್ಲಿ ಪವನ್ ಕಲ್ಯಾಣ್ ರೇಣು ಅವರಿಗೆ ವಿಚ್ಚೇದನ ನೀಡಿದ್ದು, ಆ ಬಳಿಕ ಒಂಟಿಯಾಗಿದ್ದ ರೇಣು ಈಗ ಮತ್ತೊಮ್ಮೆ ವಿವಾಹವಾಗಲು ಮುಂದಾಗಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋವನ್ನು ರೇಣು ಟ್ವಿಟರ್ ನಲ್ಲಿ ಹಾಕಿದ್ದರೂ ಭಾವಿ ಪತಿಯ ಮುಖ ಕಾಣದಂತೆ ಜಾಗೃತಿ ವಹಿಸಿದ್ದು, ಯಾರಾಗಲಿದ್ದಾರೆ ತಮ್ಮ ಬಾಳಸಂಗಾತಿ ಎಂಬ ಗುಟ್ಟುಬಿಟ್ಟುಕೊಟ್ಟಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...