alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಕಣಕ್ಕಿಳಿಯಲು ಪವನ್ ಕಲ್ಯಾಣ್ ರೆಡಿ….

pawan-kalyan

ಟಾಲಿವುಡ್ ನ ಸ್ಟಾರ್ ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದ್ರೆ ಯಾವ ಕ್ಷೇತ್ರದಿಂದ ಕಣಕ್ಕಿಳೀತಾರೆ ಅನ್ನೋ ಗುಟ್ಟನ್ನ ಪವನ್ ಕಲ್ಯಾಣ್ ಬಿಟ್ಟುಕೊಟ್ಟಿಲ್ಲ. ನಾನು ಗೆಲ್ಲಲಿ ಅಥವಾ ಸೋಲಲಿ, ನೀವು ನನಗೆ ಮತ ಹಾಕಿ ಅಥವಾ ಹಾಕದೇ ಇರಿ, ನಾನಂತೂ ನಿಮಗಾಗಿ ಹೋರಾಟ ಮುಂದುವರಿಸುತ್ತೇನೆ ಅಂತಾ ಪವನ್ ಹೇಳಿದ್ದಾರೆ.

ಸದಾ ನಿಮ್ಮ ಪರ ನಿಲ್ಲುತ್ತೇನೆ, ಜನರ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತುತ್ತೇನೆ ಅಂತಾ ಭರವಸೆ ನೀಡಿದ್ದಾರೆ. ಸದ್ಯದಲ್ಲೇ ಅನಂತಪುರಂನಲ್ಲಿ ಜನಸೇನಾ ಪಕ್ಷದ ಮೊದಲ ಕಚೇರಿಯನ್ನು ತೆರೆಯಲಿದ್ದಾರಂತೆ. ಜನಸೇನಾ ಪಕ್ಷ ಉದಯವಾಗಿ 2 ವರ್ಷಗಳು ಕಳೆದಿವೆ, ಆದ್ರೆ ಇದುವರೆಗೂ ಪಕ್ಷಕ್ಕೆ ಹೇಳಿಕೊಳ್ಳುವಂತಹ ಬಲವೇನಿಲ್ಲ. ಈಗ ಪವನ್ ಕಲ್ಯಾಣ್ ತಮಗೆ ಸಾಥ್ ಕೊಡುವವರ ಹುಡುಕಾಟದಲ್ಲಿದ್ದಾರೆ. 2019 ರ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿಲ್ಲ. ಸದ್ಯದಲ್ಲೇ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಪವನ್ ಕಲ್ಯಾಣ್ ಮನವಿ ಮಾಡಲಿದ್ದಾರಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...