alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿ ನಿರೂಪಕನ ಮೇಲೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಹಲ್ಲೆ

pawan

ಸಿನಿಮಾ ನಟರಿಗೆ ಅಪಾರ ಅಭಿಮಾನಿಗಳಿರ್ತಾರೆ. ಕೆಲವೊಮ್ಮೆ ಈ ಅಭಿಮಾನ ಅತಿರೇಕಕ್ಕೆ ಹೋಗುತ್ತೆ. ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಗೆ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಳೆದ ವಾರ ಬಿಡುಗಡೆಯಾದ ಪವನ್ ಕಲ್ಯಾಣ್ ರ ‘ಕಾಟಮರಾಯುಡು’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹವಾ ಎಬ್ಬಿಸಿದೆ. ಮೊದಲ ದಿನವೇ ಈ ಚಿತ್ರ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ.

ಚಿತ್ರ ಭರ್ಜರಿ ಯಶಸ್ಸು ಕಂಡಿದೆ ಅಂದ್ಮೇಲೆ ಸಹಜವಾಗಿಯೇ ವಿಮರ್ಶೆ ಕೂಡ ಚೆನ್ನಾಗಿರುತ್ತೆ. ಆದ್ರೆ ವಾಹಿನಿಯೊಂದ್ರಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಕೇವಲ 3 ಸ್ಟಾರ್ ಕೊಟ್ಟಿರೋದು ಅಭಿಮಾನಿಗಳನ್ನು ಕೆರಳಿಸಿದೆ. ಇದ್ರಿಂದ ಸಿಟ್ಟಿಗೆದ್ದ ಫ್ಯಾನ್ಸ್, ಚಿತ್ರ ವಿಮರ್ಶೆ ಮಾಡಿದ ಟಿವಿ ನಿರೂಪಕನ ಮೇಲೆ ಹಲ್ಲೆ ಮಾಡಿದ್ದಾರೆ.

ಸ್ಥಳೀಯ ತೆಲಗು ಚಾನೆಲ್ ಒಂದರಲ್ಲಿ ಸಿನಿಮಾ ಬಗ್ಗೆ ಏರ್ಪಡಿಸಲಾಗಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಪಾಲ್ಗೊಂಡಿದ್ದರು. ಆ್ಯಂಕರ್ ಕೇವಲ 3 ಸ್ಟಾರ್ ಕೊಟ್ಟಿದ್ದರಿಂದ ಕೋಪಗೊಂಡು ಸ್ಟುಡಿಯೋದಲ್ಲಿ ದಾಂಧಲೆ ಮಾಡಿದ್ದಾರೆ. ಬಾಟಲಿಗಳನ್ನೆಲ್ಲ ಒಡೆದು ಹಾಕಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...