alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಿಸ್ ನಲ್ಲಿ ನಟ ಧನುಷ್ ಗಾದ ಅನುಭವವೇನು..?

507686-dhanush

ತಮಿಳು ನಟ ಧನುಷ್ ಪ್ಯಾರಿಸ್ ಗೆ ಹೋದ ವೇಳೆ ತಮಗಾದ ವಿಶಿಷ್ಟ ಅನುಭವೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಹಲವಾರು ಮಂದಿ ವೀಕ್ಷಿಸಿದ್ದಾರೆ.

2011 ರಲ್ಲಿ ಬಿಡುಗಡೆಯಾದ ‘3’ ಚಿತ್ರದಲ್ಲಿ ಧನುಷ್ ಹಾಡಿದ್ದ ‘ಕೊಲೆವರಿ ಡಿ’ ಹಾಡು ವಿಶ್ವದಾದ್ಯಂತ ಫೇಮಸ್ ಆಗಿತ್ತು. ಈ ಹಾಡಿಗೆ ಸಂಗೀತ ನೀಡಿದ್ದ ಅನಿರುದ್ದ್ ಕುರಿತು ಮೆಚ್ಚುಗೆಯ ಮಾತುಗಳೂ ಕೇಳಿ ಬಂದಿದ್ದವು. ಈ ಹಾಡನ್ನು ಆನೇಕರು ಫ್ಲಾಶ್ ಮಾಬ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಈ ಚಿತ್ರ ಬಿಡುಗಡೆಯಾಗಿ ಈಗಾಗಲೇ ಐದು ವರ್ಷಗಳಾಗಿದೆ. ಆದರೆ ‘ಕೊಲವೆರಿ ಡಿ’ ಹಾಡು ಮಾತ್ರ ಇನ್ನೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಧನುಷ್ ಪ್ಯಾರಿಸ್ ಗೆ ಹೋದಾಗ ಕ್ಯಾಬ್ ನಲ್ಲಿ ಹೋಗುತ್ತಿದ್ದ ವೇಳೆ, ಕ್ಯಾಬ್ ಚಾಲಕ ‘ಕೊಲವೆರಿ ಡಿ’ ಹಾಡನ್ನು ಹಾಕಿದ್ದಾನೆ. ಈ ಹಾಡನ್ನು ಹಾಡಿದ್ದವರು ತನ್ನ ಕ್ಯಾಬ್ ನಲ್ಲಿ ಕುಳಿತಿದ್ದಾರೆಂಬ ಅರಿವೇ ಆತನಿಗಿಲ್ಲ. ಈ ಹಾಡು ಕೇಳಿ ಬರುತ್ತಿದ್ದ ವೇಳೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಧನುಷ್ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಾಕಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...