alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳನ್ನು ಕೆರಳಿಸಿದೆ ಪರಿಣಿತಿಯ ಫೋಟೋ !

parineeti_640x480_41484055115

ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿರುವ ಈ ಫೋಟೋ ಅಭಿಮಾನಿಗಳನ್ನು ಕೆರಳಿಸಿದೆ. ಶೂಟಿಂಗ್ ನಿಮಿತ್ತ ದುಬೈನಲ್ಲಿರೋ ಪರಿಣಿತಿ ಅಲ್ಲಿನ ಬೀಚ್ ನಲ್ಲಿ ಸುತ್ತಾಡ್ತಾ ಇದ್ರು. ಕಪ್ಪು ಬಣ್ಣ ಪುಟ್ಟ ಡ್ರೆಸ್ ನಲ್ಲಿ ಕ್ಯೂಟಾಗಿ ಕಾಣ್ತಾ ಇದ್ರು. ಆದ್ರೆ ಆಕೆಯ ಜೊತೆಗೆ ಹೆಜ್ಜೆ ಹಾಕ್ತಾ ಇದ್ದ ಅಸಿಸ್ಟೆಂಟ್ ಪಾಡು ನೋಡಿದ್ರೆ ಎಂಥವರಿಗೂ ಪಾಪ ಎನಿಸುವಂತಿತ್ತು.

ಪರಿಣಿತಿಗೆ ಬಿಸಿಲು ತಾಕದಂತೆ ಛತ್ರಿ ಹಿಡಿದಿದ್ದ ಆತ, ಮೂರು ಬ್ಯಾಗ್ ಗಳನ್ನು ಕೂಡ ಹೊತ್ತುಕೊಂಡಿದ್ದ. ಮೂರು ಬ್ಯಾಗ್, ಒಂದು ಛತ್ರಿ ಇವಿಷ್ಟರಲ್ಲಿ ಒಂದನ್ನು ತೆಗೆದುಕೊಂಡಿದ್ರೆ ಪರಿಣಿತಿಯ ಸ್ಟಾರ್ ಗಿರಿಗೆ ಧಕ್ಕೆ ಬರ್ತಾ ಇರಲಿಲ್ಲ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಛತ್ರಿ ಏನು 100 ಕೆಜಿ ಭಾರವಿದ್ಯಾ ಅಂತಾ ಎಲ್ರೂ ಪ್ರಶ್ನಿಸಿದ್ದಾರೆ.

ಪರಿಣಿತಿಯ ದುರಹಂಕಾರವನ್ನು ಟೀಕಿಸಿ 500 ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಫಿಟ್ನೆಸ್, ವೇಯ್ಟ್ ಲಾಸ್ ಅಂತೆಲ್ಲಾ ಬಿಟ್ಟಿ ಪ್ರಚಾರ ಪಡೆಯೋ ನಟಿ ಒಂದು ಛತ್ರಿ ಹಿಡಿದುಕೊಳ್ಳದೇ ಅಸಿಸ್ಟೆಂಟ್ ಕೈಯಲ್ಲಿ ಈ ಪರಿ ಸೇವೆ ಮಾಡಿಸಿಕೊಳ್ತಿದ್ದಾಳೆ ಅಂತಾ ಎಲ್ರೂ ಗರಂ ಆಗಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...