alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಣಿತಿಯ ಬಯಕೆ ಕೇಳಿ ಶಾಕ್ ಆಗಿದ್ದಾಳಾ ದೀಪಿಕಾ?

india-entertainment-cinema_3e155c4c-d925-11e5-a762-0977dd9ba750

ಈ ಸುದ್ದಿ ಓದಿದ್ರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶಾಕ್ ಆಗೋದಂತೂ ಗ್ಯಾರಂಟಿ. ಪ್ರಿಯಕರ ರಣವೀರ್ ಸಿಂಗ್ ಜೊತೆ ಬೇರೊಬ್ಬ ನಟಿ ಸ್ನಾನ ಮಾಡಲು ಬಯಸ್ತಾಳೆ ಅನ್ನೋದು ಗೊತ್ತಾದ್ರೆ ದೀಪಿಯ ರಿಯಾಕ್ಷನ್ ಹೇಗಿರಬಹುದು ಹೇಳಿ? ಅಭಿಮಾನಿಗಳಂತೂ ಇದನ್ನು ಕೇಳಿ ಅಚ್ಚರಿಪಟ್ಟಿದ್ದಾರೆ.

ನಟಿ ಪರಿಣಿತಿ ಚೋಪ್ರಾಗೆ ರಣವೀರ್ ಸಿಂಗ್ ಜೊತೆಗೆ ಸ್ನಾನ ಮಾಡೋ ಆಸೆಯಂತೆ. ಆದ್ರೆ ನೀರಿನಲ್ಲಲ್ಲ, ರಣವೀರ್ ಗೆ ಬಹಳ ಇಷ್ಟವಾದ ಚಾಕಲೇಟ್ ನಲ್ಲಿ. ಟಬ್ ತುಂಬಾ ಚಾಕಲೇಟ್ ತುಂಬಿಸಿ ಅದರಲ್ಲಿ ಇಬ್ಬರೂ ಜಂಪ್ ಮಾಡಬೇಕು ಅಂತಾ ‘ನೋ ಫಿಲ್ಟರ್ ನೇಹಾ’ ಶೋನಲ್ಲಿ ಪರಿಣಿತಿ ಹೇಳಿದ್ದಾಳೆ.

ಆದ್ರೆ ಇಬ್ಬರೂ ಬಟ್ಟೆ ಧರಿಸಿಯೇ ಸ್ನಾನ ಮಾಡ್ತೀವಿ ಅಂತಾನೂ ಹೇಳ್ಕೊಂಡಿದ್ದಾಳೆ. ಪರಿಣಿತಿಯ ಈ ವಿಚಿತ್ರ ಆಸೆ ಕೇಳಿ ದೀಪಿಕಾ ಹೊಟ್ಟೆ ಉರಿದುಕೊಳ್ಳೋದಂತೂ ಗ್ಯಾರಂಟಿ. ಪರಿಣಿತಿ ಚೋಪ್ರಾಗೆ ಸೈಫ್ ಅಲಿ ಖಾನ್ ಮೇಲೂ ಕ್ರಶ್ ಇತ್ತಂತೆ. ಪರಿಣಿತಿ, ಸೈಫ್ ಚಿತ್ರವಿರೋ ಲೇಯ್ಸ್ ಪ್ಯಾಕೆಟ್ ಗಳನ್ನು ಸಂಗ್ರಹಿಸ್ತಾ ಇದ್ಲು.

ಹತ್ತಾರು ಬಾರಿ ಈ ವಿಷಯವನ್ನು ಕರೀನಾ ಬಳಿ ಹೇಳಿ ಬೋರ್ ಹೊಡೆಸಿದ್ದೇನೆ ಅಂತಾನೂ ಹೇಳ್ಕೊಂಡಿದ್ದಾಳೆ. ನಟ ಅರ್ಜುನ್ ಕಪೂರ್ ಅಂತೂ ಸಿಕ್ಕಾಪಟ್ಟೆ ಕಿರಿಕಿರಿ ಮನುಷ್ಯ ಅಂತಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...