alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಜೊತೆ ಕೆಟ್ಟದಾಗಿ ನಡೆದುಕೊಂಡ್ರಾ ಅರ್ಜುನ್ ಕಪೂರ್…?

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಪರಿಣಿತಿ ಚೋಪ್ರಾ ಮತ್ತೆ ತೆರೆ ಮೇಲೆ ಒಂದಾಗಿ ಬರ್ತಿದ್ದಾರೆ. 2012ರಲ್ಲಿ ಇಷ್ಕಜಾದೆ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ಜೋಡಿ ನಮಸ್ತೆ ಇಂಗ್ಲೆಂಡ್ ಚಿತ್ರದ ಮೂಲಕ ಮತ್ತೆ ತೆರೆಗೆ ಬರ್ತಿದ್ದಾರೆ. ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.

ಚಿತ್ರದ ಸೆಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋವನ್ನು ಪರಿಣಿತಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಸೆಟ್ ನಲ್ಲಿ ನನ್ನ ಜೊತೆ ಅರ್ಜುನ್ ಕೆಟ್ಟದಾಗಿ ನಡೆದುಕೊಳ್ತಾರೆ ನೋಡಿ ಎಂದು ಶೀರ್ಷಿಕೆ ಹಾಕಿದ್ದಾಳೆ. ಈ ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ. ಪರಿಣಿತಿ ಗಂಭೀರವಾಗಿ ಆರೋಪ ಮಾಡಿಲ್ಲ. ಸುಮ್ನೆ ತಮಾಷೆಗೆ ನಡೆದ ಘಟನೆಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾಳಷ್ಟೆ.

ನಮಸ್ತೆ ಇಂಗ್ಲೆಂಡ್ ಜೊತೆ ಸಂದೀಪ್ ಔರ್ ಪಿಂಕಿ ಚಿತ್ರದಲ್ಲೂ ಅರ್ಜುನ್ ಕಪೂರ್ ಹಾಗೂ ಪರಿಣಿತಿ ಕಾಣಿಸಿಕೊಳ್ತಿದ್ದಾರೆ. ಎರಡೂ ಚಿತ್ರಕ್ಕಾಗಿ ಇಬ್ಬರೂ ಸಾಕಷ್ಟು ಕಸರತ್ತು ಮಾಡಿದ್ದಾರೆ. ಅನೇಕ ದಿನಗಳ ನಂತ್ರ ಒಟ್ಟಿಗೆ ಕಾಣಿಸಿಕೊಳ್ತಿರುವ ಜೋಡಿಗೆ ಅಭಿಮಾನಿಗಳು ಜೈ ಎನ್ನುತ್ತಾರಾ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...