alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಜುನ್ ಕಪೂರ್ ಜೊತೆಗಿನ ರೋಮ್ಯಾನ್ಸ್ ಕುರಿತು ಪರಿಣಿತಿ ಹೇಳಿದ್ದೇನು…?

ಬಾಲಿವುಡ್ ನ ಪಕ್ಕದ ಮನೆ ಹುಡುಗಿ ಮತ್ತು ಎದುರು ಮನೆ ಹುಡುಗನ ಹಾಗಿರೋ ಜೋಡಿ ಅಂದ್ರೆ ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಅನ್ನೋ ಟಾಕ್ ಬಿಟೌನ್ ತುಂಬೆಲ್ಲಾ ಹರಿದಾಡ್ತಿದೆ.

ಅಕ್ಟೋಬರ್ 18ರಂದು ಅರ್ಜುನ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಅವರ ನಮಸ್ತೆ ಇಂಗ್ಲೆಂಡ್ ಸಿನಿಮಾ ಕೂಡ ಬಿಡುಗಡೆಯಾಗಿದೆ. 2007ರಲ್ಲಿ ಬಿಡುಗಡೆಯಾಗಿದ್ದ ನಮಸ್ತೆ ಲಂಡನ್ ಸಿನಿಮಾದ ಸೀಕ್ವೆಲ್ ಇದಾಗಿದ್ದು ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇದರ ನಡುವೆ ಪರಿಣಿತಿ ಚೋಪ್ರಾ ಕೋ ಸ್ಟಾರ್ ಅರ್ಜುನ್ ಕಪೂರ್ ಬಗ್ಗೆ ಸ್ವಾರಸ್ಯಕರವಾದ ಮಾಹಿತಿಯನ್ನು ಹೊರಹಾಕಿದ್ದಾರೆ.

ಅರ್ಜುನ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ಕಷ್ಟ ಅಂತ ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ. ಇದು ಸೀರಿಯಸ್ ಅಂದುಕೊಳ್ಳಬೇಡಿ. ಖಾಸಗಿ ಮಾಧ್ಯಮವೊಂದು ಸಿನಿಮಾದ ಸಂದರ್ಶನದ ಭಾಗವಾಗಿ ಕೇಳಿದಂತಾ ಪ್ರಶ್ನೆಯೊಂದಕ್ಕೆ ಪರಿಣಿತಿ ಚೋಪ್ರಾ, ಅರ್ಜುನ್ ಕಪೂರ್ ಜೊತೆಗೆ ರೊಮ್ಯಾನ್ಸ್ ಮಾಡೋದು ಕಷ್ಟ ಎಂದಿದ್ದಾರೆ. ಅದಕ್ಕೆ ಅವರು ಕೊಟ್ಟಿರೋ ಕಾರಣ ಕೂಡ ಅಷ್ಟೇ ಸ್ಪೆಷಲ್ ಆಗಿದೆ.

ಅರ್ಜುನ್ ಮತ್ತು ನನ್ನ ನಡುವೆ ಆತ್ಮೀಯವಾದಂತಾ ಗೆಳೆತನವಿದೆ. ಊಹೆಗೂ ನಿಲುಕದ ಮತ್ತು ಶುದ್ಧ ಗೆಳೆತನವಿದೆ. ನಾವಿಬ್ಬರೂ ಆ ಗೆಳೆತನಕ್ಕೆ ಅಷ್ಟೇ ಮನ್ನಣೆಯನ್ನ ಕೊಡ್ತೀವಿ ಅಂತ ಪರಿಣಿತಿ ಚೋಪ್ರಾ ಹೇಳಿಕೊಂಡಿದ್ದಾರೆ.

ಅಂದಹಾಗೆ ಪರಿಣಿತಿ ಮತ್ತು ಅರ್ಜುನ್ ಕಪೂರ್ ನಮಸ್ತೆ ಇಂಗ್ಲೆಂಡ್ ನಲ್ಲಿ ಎರಡನೇ ಬಾರಿ ಕಪಲ್ ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. 2011ರಲ್ಲಿ ಈ ಜೋಡಿ ಇಷ್ಕ್ ಜಾದೆ ಸಿನಿಮಾದಲ್ಲಿ ಮೊದಲ ಬಾರಿ ಒಂದಾಗಿ ಕಾಣಿಸಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...