alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲುಗು ಸಿನಿಮಾಕ್ಕಾಗಿ ಪರಿಣಿತಿ ಪಡೆಯುತ್ತಿದ್ದಾರೆ ಬರೋಬ್ಬರಿ ಸಂಭಾವನೆ

Parineeti-Chopra 3457ದಕ್ಷಿಣ ಭಾರತ ಚಿತ್ರರಂಗದಿಂದ ಈ ಹಿಂದೆ ಬಾಲಿವುಡ್ ಗೆ ಹಾರಿದ ಆನೇಕ ನಾಯಕಿಯರು ಬಾಲಿವುಡ್ ಚಿತ್ರರಂಗದಲ್ಲಿ ದಶಕಗಳ ಕಾಲ ಮೆರೆದಿದ್ದಾರೆ. ಹಾಗೇ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸಿದವರು ಸೌತ್ ಸಿನಿ ದುನಿಯಾದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಮತ್ತೊಬ್ಬ ಬಾಲಿವುಡ್ ನಟಿ ಸೌತ್ ಸಿನಿ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಬಾಲಿವುಡ್ ನಟಿ ಪರಿಣತಿ ಛೋಪ್ರಾ, ಇದೀಗ ಖ್ಯಾತ ಬಾಲಿವುಡ್ ನಟ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಲಿದ್ದು, ಇದಕ್ಕಾಗಿ ಬರೋಬ್ಬರಿ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆಂದು ಹೇಳಲಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದೆ.

ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಚಿತ್ರ ಸಮಂತಾ ರುಥ್ ಪ್ರಭು, ಕಾಜಲ್ ಅಗರ್ವಾಲ್, ಪ್ರಣೀತಾ ಸುಭಾಷ್, ಸತ್ಯರಾಜ್, ರಾವ್ ರಮೇಶ್, ನರೇಶ್, ರೇವತಿ ಮತ್ತು ಸಯ್ಯಾಜಿ ಶಿಂಧೆಯವರಂತಹ ಘಟಾನುಘಟಿಗಳು ಅಭಿನಯಿಸಿದ್ದರೂ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿರುವ ಹಿನ್ನಲೆಯಲ್ಲಿ ಹೊಸ ಚಿತ್ರದ ಕುರಿತು ಎಚ್ಚರಿಕೆಯ ಹೆಜ್ಜೆಗಳನ್ನಿಡಲಾಗುತ್ತಿದ್ದು, ಚಿತ್ರಕ್ಕಾಗಿ ಹೈದರಾಬಾದಿನ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ನಿರ್ಮಿಸಲಾಗಿದೆ ಎನ್ನಲಾಗಿದೆ. ಭಾರೀ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಮಹೇಶ್ ಬಾಬು ಅಭಿಮಾನಿಗಳಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಚಿತ್ರದಲ್ಲಿರಲಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...