alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಪರಿ ಟ್ರೈಲರ್ ಗೆ ಕೊಹ್ಲಿ ನೀಡಿದ್ದಾರೆ ಇಂಥ ಪ್ರತಿಕ್ರಿಯೆ

ಅನುಷ್ಕಾ ಶರ್ಮಾ ಅಭಿನಯದ ಭೂತದ ಚಿತ್ರ ಪರಿ ಟ್ರೈಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದೆ. 1.34 ನಿಮಿಷದ ಈ ಟ್ರೈಲರ್ ನಲ್ಲಿ ಅನುಷ್ಕಾ ಭಿನ್ನವಾಗಿ ಕಾಣಿಸಿಕೊಂಡಿದ್ದಾಳೆ. ಟ್ರೈಲರ್ ನಲ್ಲಿ ಅನುಷ್ಕಾ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಚಿತ್ರದ ಟ್ರೈಲರ್ ಸಸ್ಪೆನ್ಸ್ ಜೊತೆ ಭಯ ಹುಟ್ಟಿಸುವಂತಿದೆ.

ಟೀಂ ಇಂಡಿಯಾ ನಾಯಕ ಹಾಗೂ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಪರಿ ಟ್ರೈಲರನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ನನಗೆ ಕಾಯಲು ಸಾಧ್ಯವಾಗ್ತಿಲ್ಲ. ಇಂಥ ಅವತಾರವನ್ನು ಮೊದಲು ನೋಡಿರಲಿಲ್ಲವೆಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

ಪರಿ ಟ್ರೈಲರ್ ಗೆ ಬಾಲಿವುಡ್ ನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ರಣವೀರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅರೆ ಬಾಪ್ರೇ ಎಂದು ಕಮೆಂಟ್ ಮಾಡಿದ್ದಾರೆ. ಚಿತ್ರವನ್ನು ಅನುಷ್ಕಾ ಶರ್ಮಾ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದು, ಮಾರ್ಚ್ 9.2018ರಂದು ಚಿತ್ರ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...