alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ಸರೋವರದ ಬಳಿ ಬಾಲಿವುಡ್ ಗೀತೆಯ ಗುನುಗು

ಕಲೆಗೆ ಭಾಷೆ, ಧರ್ಮ, ಯಾವುದೇ ಭೌಗೋಳಿಕ ಪರಿಧಿಯ ಕಟ್ಟಳೆಯಿಲ್ಲ. ಸಂಗೀತವೂ ಹಾಗೆಯೇ ಅದು ಇವೆಲ್ಲವನ್ನೂ ಮೀರಿದ್ದು. ಮನಸ್ಸಿಗೆ ತಾಕುವ, ಭಾವಗಳನ್ನು ಬೆಸೆಯುವ, ನೆಮ್ಮದಿ ನೀಡುವ ಸಂಗೀತ ಮನುಷ್ಯರನ್ನು ಮಾತ್ರವಲ್ಲ ಧರ್ಮವನ್ನೂ ಒಂದು ಮಾಡುತ್ತದೆ.

ಪಾಕಿಸ್ತಾನದ ಸೈಫುಲ್ಲಾಹ್ ಸರೋವರ ಪಕ್ಕದಲ್ಲಿ ಕುಳಿತು ವ್ಯಕ್ತಿಯೊಬ್ಬ ವೀಣೆಯಂತಹ ಸಂಗೀತದ ವಾದ್ಯ ರುಬಬ್ ನಲ್ಲಿ ನುಡಿಸಿದ ಬಾಲಿವುಡ್ ಚಿತ್ರಗೀತೆ ಎಂಥವರ ಮನಸ್ಸನ್ನೂ ಸೆಳೆಯುತ್ತದೆ. ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ ಅಭಿನಯಿಸಿದ್ದ ಬಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರ ಧಡಕನ್ ಚಿತ್ರ ಗೀತೆ ದಿಲ್ ನೆ ಯೆ ಕಹಾ ಹೈ ದಿಲ್ ಸೆ ಗೀತೆ ಸಂಗೀತಾಸಕ್ತರ ಮನ ತಟ್ಟುತ್ತದೆ.

ಆತ ನುಡಿಸಿರುವ ಹಾಡಿನ ವಿಡಿಯೋವನ್ನು ಗಿಲ್ಗಿಟ್ ಬಲ್ಚಿಸ್ತಾನ್ ದ ಲ್ಯಾಂಡ್ ಆಫ್ ಬ್ಯೂಟಿ ಅನ್ನೋ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಅಭಿಮಾನಿಗಳು ಒಬ್ಬರಾದ ಮೇಲೊಬ್ಬರಂತೆ ಕಮೆಂಟ್ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...