alex Certify
ಕನ್ನಡ ದುನಿಯಾ       Mobile App
       

Kannada Duniya

ವೇದಿಕೆ ಮೇಲೆ ನಟಿಗೆ ಮುತ್ತಿಡಲು ಮುಂದಾದ ನಟನ ವಿಡಿಯೋ ವೈರಲ್

ಪಾಕಿಸ್ತಾನದ ನಟಿ ಮಹೀರಾ ಖಾನ್ ಮತ್ತೆ ಸುದ್ದಿಯಲ್ಲಿದ್ದಾಳೆ. ನಟ ಜಾವೇದ್ ಶೇಖ್ ಜೊತೆ ಮಹೀರಾ ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನಿ ಚಿತ್ರ ವೆರ್ನಾ ಚಿತ್ರದ ನಟನೆಗಾಗಿ ಮಹೀರಾ ಉತ್ತಮ ನಟಿ ಪ್ರಶಸ್ತಿ ಬಾಚಿಕೊಂಡಿದ್ದಾಳೆ. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಮೇಲೆ ಹೋದಾಗ ಮಹೀರಾ ಖಾನ್ ಗೆ ನಟ ಜಾವೇದ್ ಚುಂಬಿಸಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಪ್ರಶಸ್ತಿ ಘೋಷಣೆಯಾಗ್ತಿದ್ದಂತೆ ಮಹೀರಾ ವೇದಿಕೆ ಮೇಲೆ ಹೋಗ್ತಾಳೆ. ಅಲ್ಲಿಯೇ ಇದ್ದ ಜಾವೇದ್ ಮಹೀರಾ ಕೆನ್ನೆಗೆ ಮುತ್ತಿಡಲು ಯತ್ನಿಸುತ್ತಾನೆ. ಇದನ್ನು ಒಪ್ಪದೆ ಕೇವಲ ಪ್ರಶಸ್ತಿ ಪಡೆದು ಮಹೀರಾ ವಾಪಸ್ ಬರ್ತಾಳೆ. ವಿಡಿಯೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪ್ರತಿಕ್ರಿಯೆಗಳು ಬರ್ತಿವೆ. ಟ್ವೀಟರ್ ಬಳಕೆದಾರರು ಜಾವೇದ್ ವರ್ತನೆಯನ್ನು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹೀರಾ, ಸುದ್ದಿಗಾಗಿ ಸಣ್ಣ ಸಣ್ಣ ವಿಷ್ಯವನ್ನು ಸುದ್ದಿ ಮಾಡಬೇಡಿ. ಜಾವೇದ್ ಉದ್ಯಮದ ಹಿರಿಯ ನಟ. ನಮ್ಮೆಲ್ಲರಿಗೆ ಮಾರ್ಗದರ್ಶಿ ಎಂದಿದ್ದಾಳೆ. ಶಾರುಕ್ ಖಾನ್ ಜೊತೆ ರಾಯಿಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮಹೀರಾ, ಖಾನ್ ರಣವೀರ್ ಜೊತೆ ಧೂಮಪಾನ ಮಾಡಿ ಸುದ್ದಿಯಾಗಿದ್ದಳು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...