alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಯುಗಾದಿ ದಿನವೇ ಶುಭಾರಂಭ ಮಾಡಿದೆ. ಬೆಂಗಳೂರು ಹನುಮಂತನಗರದ ಶ್ರೀರಾಮಾಂಜನೇಯ ದೇವಾಲಯದಲ್ಲಿ ‘ಪೈಲ್ವಾನ್’ ಚಿತ್ರದ ಮುಹೂರ್ತ ನೆರವೇರಿದೆ. ಪ್ರಿಯಾ ಸುದೀಪ್ ಕ್ಲಾಪ್ ಮಾಡಿದ್ದಾರೆ.

‘ಹೆಬ್ಬುಲಿ’ ಬಳಿಕ ಕೃಷ್ಣ ನಿರ್ದೇಶನದಲ್ಲಿ ಸುದೀಪ್ ಮತ್ತೆ ನಟಿಸುತ್ತಿದ್ದು, ‘ಪೈಲ್ವಾನ್’ ಚಿತ್ರದಲ್ಲಿ ಬಾಕ್ಸರ್ ಹಾಗೂ ಪೈಲ್ವಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ‘ಹೆಬ್ಬುಲಿ’ ಚಿತ್ರದ ತಾಂತ್ರಿಕ ವರ್ಗದವರೇ ಈ ಚಿತ್ರದಲ್ಲೂ ಜೊತೆಯಾಗಲಿದ್ದಾರೆ. ಪಾತ್ರಗಳ ಆಯ್ಕೆ ನಡೆದಿದೆ.

‘ದಿ ವಿಲನ್’, ‘ಕೋಟಿಗೊಬ್ಬ -3’ ಬಳಿಕ ಸುದೀಪ್ ‘ಪೈಲ್ವಾನ್’ನಲ್ಲಿ ಬ್ಯುಸಿಯಾಗಿದ್ದಾರೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಏಪ್ರಿಲ್ ನಿಂದ ಶೂಟಿಂಗ್ ಶುರು ಮಾಡಲು ಪ್ಲಾನ್ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...