alex Certify
ಕನ್ನಡ ದುನಿಯಾ       Mobile App
       

Kannada Duniya

ಸುದೀಪ್ ಅಭಿಮಾನಿಗಳಿಗೆ ಬಂಪರ್ ಚಾನ್ಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಹೀಗೆ ಮಾಡಿದ್ರೆ ಕಿಚ್ಚನನ್ನು ಫ್ಯಾನ್ಸ್ ಭೇಟಿ ಮಾಡಬಹುದಾಗಿದೆ. ಅದಕ್ಕೆ ಬೇಕಿರುವುದು ಟ್ಯಾಲೆಂಟ್ ಅಷ್ಟೇ.

ಸುದೀಪ್ ಒಂದು ಸಿನಿಮಾ ಒಪ್ಪಿಕೊಂಡ್ರೇ ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಾರೆ. ‘ಹೆಬ್ಬುಲಿ’ ಹೇರ್ ಸ್ಟೈಲ್ ಟ್ರೆಂಡ್ ಸೃಷ್ಠಿಸಿತ್ತು. ಅಭಿಮಾನಿಗಳಂತೂ ಹೆಬ್ಬುಲಿ ಸ್ಟೈಲ್ ನಲ್ಲಿ ಮಿಂಚಿದ್ದೇ ಮಿಂಚಿದ್ದು. ಈಗ ಕಿಚ್ಚನಿಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಥ್ರಿಲ್ ಆಗುವಂತಹ ಸುದ್ದಿ ಇದಾಗಿದೆ.

ಸುದೀಪ್ ಅಭಿನಯದ ಮುಂದಿನ ಚಿತ್ರ ‘ಪೈಲ್ವಾನ್’ ಚಿತ್ರದ ಟೈಟಲ್ ಡಿಸೈನ್ ಮಾಡಿದವರಿಗೆ ಕಾದಿದೆ ಸರ್ ಪ್ರೈಸ್. ಡಿಸೈನ್ ಇಷ್ಟವಾದ್ರೆ ಬಂಪರ್ ಬಹುಮಾನ ಸಿಗಲಿದೆ.

ನಿರ್ದೇಶಕ ಕೃಷ್ಣ ಅವರು ಈಗಾಗಲೇ ಟೈಟಲ್ ಡಿಸೈನ್ ಗೆ ಸೂಚನೆ ಕೊಟ್ಟಿದ್ದು 100 ಕ್ಕೂ ಹೆಚ್ಚು ಡಿಸೈನ್ ಗಳನ್ನು ಅಭಿಮಾನಿಗಳು ಕಳಿಸಿದ್ದಾರೆ. ಕೃಷ್ಣ ಮತ್ತು ಸುದೀಪ್ ಇಷ್ಟಪಟ್ಟ ಡಿಸೈನ್ ಗೆ ಚಿತ್ರತಂಡದಿಂದ ಬಂಪರ್ ಬಹುಮಾನ ಸಿಗಲಿದೆ.

ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ‘ಪೈಲ್ವಾನ್’ ಪೋಸ್ಟರ್ ಡಿಸೈನ್ ಮಾಡಲಾಗಿತ್ತು. ಇನ್ನೂ ಶೂಟಿಂಗ್ ಆರಂಭವಾಗದ ಕಾರಣ ಹೊಸ ಡಿಸೈನ್ ಎದುರು ನೋಡುತ್ತಿದೆ ಚಿತ್ರತಂಡ.

ಈ ಚಿತ್ರದಲ್ಲಿ ಹಿಂದೆಂದೂ ಕಂಡಿರದ ಗೆಟಪ್ ನಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಒಂದು ಪಕ್ಕಾ ಪೈಲ್ವಾನ್ ಲುಕ್ ನಲ್ಲಿ ಮತ್ತೊಂದು ವಿಶೇಷ ಗೆಟಪ್ ನಲ್ಲಿ ಅವರು ಕಾಣಿಸಿಕೊಳ್ಳಲಿದ್ದು ಎರಡೂ ಸ್ಟೈಲ್ ಗಳನ್ನು ಡಿಸೈನ್ ಮಾಡಲಾಗ್ತಿದೆ.

ಸುದೀಪ್ ಪೈಲ್ವಾನ್ ಗಾಗಿ ವಿಶೇಷ ತಯಾರಿ ನಡೆಸಿದ್ದಾರೆ. ಇದರೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅಭಿಮಾನಿಗಳಿಗೂ ಅವಕಾಶ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...