alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಸುದೀಪ್, ‘ಒಡೆಯ’ ದರ್ಶನ್ ಅಭಿಮಾನಿಗಳಿಗೆ ‘ಶಾಕಿಂಗ್ ನ್ಯೂಸ್’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಆಘಾತಕಾರಿ ಸುದ್ದಿ ಎದುರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ಆತಂಕ ತಂದಿದೆ.

ಅಂದ ಹಾಗೆ ಇದಕ್ಕೆಲ್ಲ ಕಾರಣ ಪೈರಸಿ. ಹೌದು, ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ತಂಡವೇ ಶ್ರಮವಹಿಸಿ ಕೆಲಸ ಮಾಡುತ್ತದೆ. ಭಾರಿ ಬಂಡವಾಳ ಹೂಡಿರುತ್ತಾರೆ. ಆದರೆ, ಎಲ್ಲೋ ಕುಳಿತವರು ಕ್ಷಣಮಾತ್ರದಲ್ಲಿ ಪೈರಸಿ ಮಾಡಿ ವಿಡಿಯೋ ಹರಿ ಬಿಡುವುದರಿಂದ ಚಿತ್ರಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ.

ಸುದೀಪ್ ಅಭಿನಯದ ‘ಪೈಲ್ವಾನ್’ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲಿಯೂ ಕಮಾಲ್ ಮಾಡುತ್ತಿದೆ. ಹೀಗಿರುವಾಗಲೇ ಪ್ರಸ್ತುತ ಕೆಲ ವೆಬ್ ಸೈಟ್ ಗಳಲ್ಲಿ ‘ಪೈಲ್ವಾನ್’ ಪೈರಸಿ ವಿಡಿಯೋ ಹರಿದಾಡತೊಡಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿರ್ದೇಶಕ ಕೃಷ್ಣ, ಪೈರಸಿ ವಿರುದ್ಧ ಹೋರಾಟ ನಡೆಸದಿದ್ದರೆ ಕಷ್ಟಪಟ್ಟು ಮಾಡಿದ ಸಿನಿಮಾಗಳನ್ನು ಕೆಲವರು ಹಾಳು ಮಾಡಿಬಿಡುತ್ತಾರೆ. ಕಷ್ಟಪಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡಿದ್ದೇವೆ. ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಾರೆ. ಹೀಗಾದರೆ ನಿರ್ಮಾಪಕರ ಪಾಡೇನು? ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಒಂದು ವೇಳೆ ಪೈರಸಿ ಕಂಡುಬಂದಲ್ಲಿ ಅಭಿಮಾನಿಗಳು ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದ್ದಾರೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಚಿತ್ರದ ಬಹುಮುಖ್ಯವಾದ ದೃಶ್ಯ ಲೀಕ್ ಆಗಿದೆ. ಚಿತ್ರದ ನಿರ್ದೇಶಕ ಎಂ.ಡಿ. ಶ್ರೀಧರ್ ಹೇಳುವಂತೆ, ‘ಒಡೆಯ’ ಚಿತ್ರದ ಯಾವುದೇ ಫೋಟೋ ಮತ್ತು ವಿಡಿಯೋಗಳನ್ನೂ ಬಿಡುಗಡೆ ಮಾಡದೆ ಕುತೂಹಲ ಕಾಯ್ದುಕೊಳ್ಳಲಾಗಿದೆ. ಹೀಗಿದ್ದರೂ ಚಿತ್ರದ ಮುಖ್ಯ ದೃಶ್ಯ ಲೀಕ್ ಆಗಿದೆ. ಇದರಿಂದ ಕ್ರಿಯೇಟಿವಿಟಿಗೆ ಪೆಟ್ಟು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪೈರಸಿ ಕಾಟ ಚಿತ್ರತಂಡದವರಲ್ಲಿ ಬೇಸರ, ಆತಂಕ ತಂದಿದೆ. ಬೇರೆ ಭಾಷೆಗಳಲ್ಲಿ ಹೆಚ್ಚಾಗಿರುವ ಪೈರಸಿ ಕನ್ನಡ ಚಿತ್ರರಂಗಕ್ಕೂ ಆತಂಕ ತಂದಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...