alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರಬಿತ್ತು ಸುದೀಪ್ ಚಿತ್ರದ ಮತ್ತೊಂದು ಮಾಹಿತಿ

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿ ಹಲ್ ಚಲ್ ಎಬ್ಬಿಸಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಕೃಷ್ಣ ‘ಪೈಲ್ವಾನ್’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು.

‘ಹೆಬ್ಬುಲಿ’ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಅಕ್ಟೋಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ.

ಆರ್.ಆರ್.ಆರ್. ಮೋಷನ್ ಪಿಕ್ಚರ್ಸ್ ನಡಿ ಸ್ವಪ್ನಾ ಕೃಷ್ಣ ನಿರ್ಮಾಣ ಮಾಡಲಿರುವ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

ಮತ್ತೊಂದು ವಿಷಯವೆಂದರೆ, ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಿದ್ದಾರೆ.

ಸುದೀಪ್ ಬಾಕ್ಸರ್ ಪಾತ್ರದಲ್ಲಿ ಮಾತ್ರವಲ್ಲದೇ, ಕುಸ್ತಿಪಟುವಾಗಿಯೂ ಮಿಂಚಲಿದ್ದು, ದಾವಣಗೆರೆ, ಹುಬ್ಬಳ್ಳಿಯಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಿಂಗಲ್ ಪೋಸ್ಟರ್ ನಿಂದಲೇ ‘ಪೈಲ್ವಾನ್’ ಸುದೀಪ್ ಅಭಿಮಾನಿಗಳು ಈಗಾಗಲೇ ಥ್ರಿಲ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...