alex Certify
ಕನ್ನಡ ದುನಿಯಾ       Mobile App
       

Kannada Duniya

ಸರಿಯಾಗಿ 13.03 ಗಂಟೆಗೆ ಬಿಡುಗಡೆಯಾಯ್ತು ಪದ್ಮಾವತಿ ಟ್ರೈಲರ್

ಬಾಲಿವುಡ್ ಬಹು ನಿರೀಕ್ಷಿತ ಚಿತ್ರ ಪದ್ಮಾವತಿಯ ಟ್ರೈಲರ್ ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅಭಿನಯದ ಟ್ರೈಲರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಟ್ರೈಲರ್ ನೋಡಿದ ನಂತ್ರ ಸಂಜಯ್ ಲೀಲಾ ಬನ್ಸಾಲಿ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರದಲ್ಲಿ ಮಿಂಚಿದ್ರೆ, ಶಾಹಿದ್ ರಾಜಾ ರಾವಲ್ ರತನ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಣವೀರ್ ಸಿಂಗ್ ಅಲ್ಲಾಹುದ್ದೀನ್ ಖಿಲ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ಮೂವರು ಕಲಾವಿದರೂ ಮಿಂಚಿದ್ದು, ಯುದ್ಧದ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.

ಅಕ್ಟೋಬರ್ 9ರಂದು ಮಧ್ಯಾಹ್ನ 13.03ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದಕ್ಕೊಂದು ಕಾರಣವನ್ನೂ ಚಿತ್ರತಂಡ ನೀಡಿತ್ತು. ರಾಜಾ ರಾವಲ್ ರತನ್ ಸಿಂಗ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಕ್ರಿ.ಶ1303ರಲ್ಲಿ ಯುದ್ಧ ಮಾಡಿದ್ದರಂತೆ. ಕಥೆಯ ಈ ವಿಶೇಷ ಸಂದರ್ಭವನ್ನು ಟ್ರೈಲರ್ ಬಿಡುಗಡೆಗೆ ಬಳಸಿಕೊಂಡಿದೆ ಚಿತ್ರತಂಡ. ರಾಣಿ ಪದ್ಮಾವತಿ ಚಿತ್ರ ಇದೇ ವರ್ಷ ಡಿಸೆಂಬರ್ 1ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...