alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತಾ ಪದ್ಮಾವತಿ ಬಿಡುಗಡೆ ದಿನಾಂಕ..?

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿ ವಿವಾದ ಮುಗಿಯುಂತೆ ಕಾಣ್ತಿಲ್ಲ. ಡಿಸೆಂಬರ್ 1 ಹತ್ತಿರ ಬರ್ತಿದ್ದಂತೆ ಕರಣಿ ಸೇನೆ ಜೊತೆಗೆ ಬಿಜೆಪಿ ನಾಯಕರು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಥಿಯೇಟರ್ ಗೆ ಕಲ್ಲು ತೂರಾಟ, ಸಂಜಯ್ ಲೀಲಾ ಬನ್ಸಾಲಿ ತಲೆಗೆ 5 ಕೋಟಿ, ದೀಪಿಕಾ ಪಡುಕೋಣೆ ಮೂಗು ಕತ್ತರಿಸುವುದು ಹೀಗೆ ಅನೇಕ ನಾಯಕರು ಅನೇಕ ಹೇಳಿಕೆಗಳನ್ನು ನೀಡ್ತಿದ್ದಾರೆ.

ಈ ಮಧ್ಯೆ ಸೆನ್ಸಾರ್ ಬೋರ್ಡ್ ಕೂಡ ಚಲನಚಿತ್ರ ವಿಮರ್ಶೆ ಮಾಡಿಲ್ಲ ಎನ್ನಲಾಗ್ತಿದೆ. ಶುಕ್ರವಾರ ಯಾವುದೇ ಪ್ರಮಾಣಿಕೃತ ಸಹಿ ಹಾಕದೆ ನಿರ್ಮಾಪಕರಿಗೆ ಪ್ರಮಾಣಪತ್ರವನ್ನು ವಾಪಸ್ ನೀಡಿದೆ ಎಂದು ಮೂಲಗಳು ಹೇಳಿವೆ. ಗುಜರಾತ್ ಚುನಾವಣೆ ಹತ್ತಿರದಲ್ಲಿರುವ ಕಾರಣ ಚುನಾವಣೆ ನಂತ್ರ ಚಿತ್ರ ಬಿಡುಗಡೆ ಮಾಡುವಂತೆ ಬಿಜೆಪಿ ಮನವಿ ಮಾಡಿದೆ.

ಈ ಎಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಜನವರಿ 12ರಂದು ಚಿತ್ರ ಬಿಡುಗಡೆಗೆ ಮುಂದಾಗಿದೆ. ಡಿಸೆಂಬರ್ 1ರ ಬದಲು ಜನವರಿ 12ರಂದು ಚಿತ್ರ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಪದ್ಮಾವತಿ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ವಾದ-ವಿವಾದದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಕ್ಕಾಗಿ ನಾನು ಎರಡು ವರ್ಷ ಕಷ್ಟಪಟ್ಟಿದ್ದೇನೆ. ಚಿತ್ರದ ಬಗ್ಗೆ ಏನೆಲ್ಲ ವಿವಾದವಾಗ್ತಿದೆ ಆ ಬಗ್ಗೆ ನನಗೆ ದುಃಖವಿದೆ. ನಮ್ಮ ದೇಶದ ಕಾನೂನಿನ ಬಗ್ಗೆ ನನಗೆ ನಂಬಿಕೆಯಿದೆ. ಆದ್ರೆ ವಿವಾದಕ್ಕೆ ಕೆಲವರು ನೀಡ್ತಿರುವ ಪ್ರತಿಕ್ರಿಯೆ ನಗು ತರಿಸುವಂತಿದೆ ಎಂದು ದೀಪಿಕಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...