alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಜ್ಯಗಳಲ್ಲೂ ಪದ್ಮಾವತ ಬಿಡುಗಡೆಯಾಗೋದು ಅನುಮಾನ

ಅದೇನೇ ಮಾಡಿದ್ರೂ ಸಂಜಯ್ ಲೀಲಾ ಬನ್ಸಾಲಿ ಸಂಕಷ್ಟ ಮುಗಿಯುವಂತೆ ಕಾಣ್ತಿಲ್ಲ. ಪದ್ಮಾವತಿ ಹೆಸರು ಬದಲಿಸಿ ಥಿಯೇಟರ್ ಗೆ ತರಲು ಸಿದ್ಧರಾಗಿರುವ ಸಂಜಯ್ ಲೀಲಾ ಬನ್ಸಾಲಿಗೆ ಮತ್ತೆ ವಿರೋಧಗಳು ಎದುರಾಗುತ್ತಿವೆ.

ರಾಜಸ್ತಾನದಲ್ಲಿ ಪದ್ಮಾವತ ಚಿತ್ರವನ್ನು ಈಗಾಗಲೇ ಬ್ಯಾನ್ ಮಾಡಲಾಗಿದೆ. ಈಗ ಗೋವಾ ಹಾಗೂ ಹಿಮಾಚಲದ ಸರದಿ. ಈ ರಾಜ್ಯಗಳಲ್ಲಿ ಕರಣಿ ಸೇನೆ ಪದ್ಮಾವತಿ ವಿರುದ್ಧ ಮತ್ತೆ ಪ್ರತಿಭಟನೆಗಿಳಿದಿದೆ. ಪದ್ಮಾವತಿ ಚಿತ್ರ ಬಿಡುಗಡೆಯಾದ್ರೆ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದೆ.

ಪದ್ಮಾವತಿ ಚಿತ್ರ ಪದ್ಮಾವತ ಚಿತ್ರವಾಗಿ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಇದೇ 25ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಆದ್ರೆ ಚಿತ್ರಕ್ಕೆ ಕ್ಲೀನ್ ಚಿಟ್ ನೀಡಿದ ಸೆನ್ಸಾರ್ ಬೋರ್ಡ್ ವಿರುದ್ಧವೇ ಕರಣಿ ಸೇನೆ ಹೋರಾಟ ಶುರುಮಾಡಿದೆ. ಜನವರಿ 12ರಂದು ಮುಂಬೈ ಸೆನ್ಸಾರ್ ಬೋರ್ಡ್ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ದೇಶದಾದ್ಯಂತ ಚಿತ್ರ ಬಿಡುಗಡೆಯಾಗಬಾರದು ಎಂಬುದು ಕರಣಿ ಸೇನೆ ಆಗ್ರಹವಾಗಿದೆ. ಹೆಸರು ಬದಲಿಸಿದ್ರೆ ಎಲ್ಲ ಬದಲಾಗುತ್ತೆ ಎಂದಾದ್ರೆ ಪೆಟ್ರೋಲ್ ಹೆಸರನ್ನು ಗಂಗಾಜಲವೆಂದು ಬದಲಿಸಿ ಥಿಯೇಟರ್ ಗೆ ಹಾಕುವುದಾಗಿ ಕರಣಿ ಸೇನೆ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...