alex Certify
ಕನ್ನಡ ದುನಿಯಾ       Mobile App
       

Kannada Duniya

”ದೀಪಿಕಾ, ಭನ್ಸಾಲಿ ತಲೆ ತಂದು ಕೊಟ್ಟವರಿಗೆ 5 ಕೋಟಿ ಬಹುಮಾನ”

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ವಿರುದ್ಧದ ಪ್ರತಿಭಟನೆ ತೀವ್ರಗೊಳ್ತಿದೆ. ಚಿತ್ರ ಬಿಡುಗಡೆಗೆ ರಾಜ್ಪೂತ್ ಕರ್ಣಿ ಸೇನಾ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಜೈಪುರದಲ್ಲಿ ಈ ಸಂಘಟನೆ ಭನ್ಸಾಲಿ ಅವರ ಮೇಲೂ ದಾಳಿ ನಡೆಸಿತ್ತು.

ನೊಯ್ಡಾದಲ್ಲಿ ಥಿಯೇಟರ್ ಧ್ವಂಸ ಮಾಡಲಾಗಿತ್ತು. ಅಷ್ಟೇ ಅಲ್ಲ ದೀಪಿಕಾ ಮೂಗು ಕತ್ತರಿಸೋದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಇದೀಗ ಮೀರತ್ ಮೂಲದ ಸರ್ವ ಬ್ರಾಹ್ಮಣ ಮಹಾಸಭಾ, ದೀಪಿಕಾ ಹಾಗೂ ಸಂಜಯ್ ಲೀಲಾ ಭನ್ಸಾಲಿ ತಲೆ ತಂದುಕೊಟ್ಟವರಿಗೆ 5 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಈ ಬಗ್ಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಗೆ ರಕ್ತದಲ್ಲಿ ಪತ್ರ ಬರೆದಿದೆ. ರಾಣಿ ಪದ್ಮಾವತಿ 12,000 ಮಹಿಳೆಯರಿಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಳು. ಆದ್ರೆ ಸಂಜಯ್ ಲೀಲಾ ಭನ್ಸಾಲಿ ಆಕೆಯ ಧೈರ್ಯ, ಸಾಹಸವನ್ನೇ ಪ್ರಶ್ನೆ ಮಾಡಿದ್ದಾರೆ.

ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭನ್ಸಾಲಿ ಹಾಗೂ ದೀಪಿಕಾ ಇಬ್ಬರೂ ದೇಶತೊರೆಯಬೇಕು, ಇಲ್ಲವಾದಲ್ಲಿ ಶಿರಚ್ಛೇದಕ್ಕೆ ಸಿದ್ಧರಾಗಲಿ. ದೀಪಿಕಾ ಮತ್ತು ಭನ್ಸಾಲಿ ತಲೆ ತಂದುಕೊಟ್ಟವರಿಗೆ 5 ಕೋಟಿ ರೂಪಾಯಿ ಬಹುಮಾನ ಕೊಡುತ್ತೇವೆ ಅಂತಾ ಪತ್ರದಲ್ಲಿ ಬರೆದಿದ್ದಾರೆ. ಡಿಸೆಂಬರ್ 1ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...