alex Certify
ಕನ್ನಡ ದುನಿಯಾ       Mobile App
       

Kannada Duniya

‘ಪದ್ಮಾವತಿ’ ಬಗ್ಗೆ ರಣವೀರ್ ಸಿಂಗ್ ಭಾವನಾತ್ಮಕ ಪತ್ರ

ಬಿಡುಗಡೆಯಾಗಿ 24 ಗಂಟೆ ಕಳೆಯುವಷ್ಟರಲ್ಲಿ ಪದ್ಮಾವತಿ ಚಿತ್ರದ ಟ್ರೈಲರ್ ಅನ್ನು 15 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಯುಟ್ಯೂಬ್ ಇಂಡಿಯಾ ಟ್ರೆಂಡ್ ನಲ್ಲಿ ಸದ್ಯ ಇದು ನಂಬರ್ ವನ್ ಸ್ಥಾನದಲ್ಲಿದೆ. ಇದರ ಜೊತೆ ಜೊತೆಗೆ ರಣವೀರ್ ಸಿಂಗ್ ಬರೆದಿರೋ ಪತ್ರವೊಂದು ವೈರಲ್ ಆಗಿದೆ.

ಎಲ್ಲರನ್ನೂ ಉದ್ದೇಶಿಸಿ ರಣವೀರ್ ಸಿಂಗ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ನಮ್ಮ ತಂಡ ಸುರಿಸಿದ ಕಣ್ಣೀರು, ಬೆವರು ಮತ್ತು ರಕ್ತದ ಪ್ರತಿಫಲವೇ ಪದ್ಮಾವತಿ ಅಂತಾ ಉಲ್ಲೇಖಿಸಿದ್ದಾರೆ. ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಪದ್ಮಾವತಿ ಬಿಗ್ ಬಜೆಟ್ ಚಿತ್ರ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಮುಖ್ಯಪಾತ್ರದಲ್ಲಿದ್ದಾರೆ. ಮೂವರು ಕೂಡ ಅತ್ಯದ್ಭುತವಾಗಿ ನಟಿಸಿದ್ದಾರೆ ಎನ್ನುತ್ತಿದ್ದಾರೆ ಟ್ರೈಲರ್ ನೋಡಿದ ಪ್ರೇಕ್ಷಕರು. ಡಿಸೆಂಬರ್ 1ಕ್ಕೆ ಪದ್ಮಾವತಿ ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...