alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ಚಿತ್ರದ ಬಗ್ಗೆ ಸಾಕ್ಷಿ ಮಹಾರಾಜ್ ಕಿಡಿ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ಈ ಸಾಲಿಗೆ ಬಿಜೆಪಿ ನಾಯಕ ಹಾಗೂ ಸಂಸದ ಸಾಕ್ಷಿ ಮಹಾರಾಜ್ ಕೂಡ ಸೇರಿದ್ದಾರೆ. ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಸಾಕ್ಷಿ ಮಹಾರಾಜ್, ಚಿತ್ರ ಬಿಡುಗಡೆಯೇ ಆಗಬಾರದು ಎಂದಿದ್ದಾರೆ.

ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಪದ್ಮಾವತಿ ಚಿತ್ರದಲ್ಲಿ ಹಿಂದೂ ಹಾಗೂ ರೈತರ ಅವಮಾನ ಮಾಡಲಾಗ್ತಿದೆ. ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಚಿತ್ರವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕೆಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಚಿತ್ರರಂಗದ ಜನರಿಗೂ ದೇಶಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರರಂಗದ ಜನರಿಗೆ ದೇಶಕ್ಕಿಂತ ಹಣ ಮುಖ್ಯ. ಹಣಕ್ಕಾಗಿ ನಗ್ನರಾಗುವ ಜೊತೆಗೆ ಏನೂ ಬೇಕಾದ್ರೂ ಅವರು ಮಾಡ್ತಾರೆಂದು ಸಾಕ್ಷಿ ಮಹಾರಾಜ್ ಕಿಡಿಕಾರಿದ್ದಾರೆ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪದ್ಮಾವತಿಗೆ ತೀವ್ರ ವಿರೋಧ ವ್ಯಕ್ತಪಡಿಸ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...