alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಸರು ಬದಲಾದ್ರೂ ತಪ್ಪದ ಸಂಕಷ್ಟ:‘ಪದ್ಮಾವತ್’ಗೆ ಶಾಕ್ !

ಗೊಂದಲಗಳೆಲ್ಲಾ ಬಗೆಹರಿದು ಇನ್ನೇನು ತೆರೆಗೆ ಬರಲು ಡೇಟ್ ಕೂಡ ಫಿಕ್ಸ್ ಆಗಿದ್ರೂ ‘ಪದ್ಮಾವತಿ’ ಸಂಕಷ್ಟ ಬಗೆಹರಿದಿಲ್ಲ. ‘ಪದ್ಮಾವತ್’ ಆಗಿ ಇದೇ ಜನವರಿ 25 ರಂದು ತೆರೆಗೆ ಬರಲು ಸಜ್ಜಾಗಿರುವ ಚಿತ್ರಕ್ಕೆ ರಾಜಸ್ತಾನದಲ್ಲಿ ಆಡಳಿತ ಪಕ್ಷ ಬಿ.ಜೆ.ಪಿ. ಶಾಕ್ ಕೊಟ್ಟಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗಾಗಲೇ ‘ಪದ್ಮಾವತಿ’ ತೆರೆ ಕಾಣಬೇಕಿತ್ತು. ಆದರೆ, ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಚಿತ್ರೀಕರಣದ ಸಂದರ್ಭದಲ್ಲಿಯೂ ದಾಳಿ ನಡೆಸಲಾಗಿತ್ತು. ನಿರಂತರ ಬೆದರಿಕೆ ನಡುವೆಯೂ ಚಿತ್ರ ಬಿಡುಗಡೆಗೆ ಸಿದ್ಧವಾಗಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.

ಕೊನೆಗೆ ಸೆನ್ಸಾರ್ ಮಂಡಳಿ ಹಲವು ಷರತ್ತುಗಳೊಂದಿಗೆ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.

‘ಪದ್ಮಾವತ್’ ಹೆಸರಲ್ಲಿ ಜನವರಿ 25 ರಂದು ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಹೀಗಿರುವಾಗಲೇ ರಾಜಸ್ತಾನ ಸಿ.ಎಂ. ವಸುಂಧರಾ ರಾಜೇ ಅವರು ಚಿತ್ರದ ಬಗ್ಗೆ ಆಕ್ಷೇಪಿಸಿದ್ದಾರೆ.

ರಾಜಸ್ತಾನದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಚಿತ್ರದಲ್ಲಿ  ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಸ್ತಾನದಲ್ಲಿ ಬಿ.ಜೆ.ಪಿ. ಮುಖಂಡರು ಚಿತ್ರ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...