alex Certify
ಕನ್ನಡ ದುನಿಯಾ       Mobile App
       

Kannada Duniya

ಪಾತ್ರ ನೀಡುವ ಮೊದಲು ಈ ನಟಿ ಮುಂದೆ ಇಂಥ ಬೇಡಿಕೆಯಿಟ್ಟಿದ್ದರಂತೆ…!

ಹಾಲಿವುಡ್ ನಿಂದ ಹಿಡಿದು ಬಾಲಿವುಡ್ ವರೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಈ ಮಧ್ಯೆ ಸಂಜಯ್ ಲೀಲಾ ಬನ್ಸಾಲಿ ಪದ್ಮಾವತ್ ಚಿತ್ರದಲ್ಲಿ ಮೆಹರುನ್ನಿಸಾ ಪಾತ್ರದಲ್ಲಿ ನಟಿಸಿರುವ ಅದಿತಿ ರಾವ್ ಆಘಾತಕಾರಿ ಸಂಗತಿಯನ್ನು ಹೊರ ಹಾಕಿದ್ದಾರೆ.

ಅದಿತಿ ರಾವ್ ಹೈದರಿ ಬಾಲಿವುಡ್ ಪ್ರವೇಶ ಮಾಡಿ 7 ವರ್ಷ ಕಳೆದಿದೆ. ಈಗ ಅದಿತಿ ಯಶಸ್ವಿ ನಟಿಯರಲ್ಲಿ ಒಬ್ಬಳು. ಆರಂಭದ ದಿನಗಳಲ್ಲಿ ಕಷ್ಟಪಟ್ಟಿದ್ದ ಅದಿತಿ ಕಾಸ್ಟಿಂಗ್ ಕೌಚ್ ಎದುರಿಸಿದ್ದಳಂತೆ. Sunday Guardian ಗೆ ನೀಡಿದ ಸಂದರ್ಶನದಲ್ಲಿ ಅದಿತಿ ಕಹಿ ಸತ್ಯವನ್ನು ಹೊರ ಹಾಕಿದ್ದಾಳೆ. ಪಾತ್ರಕ್ಕಾಗಿ ನನ್ನ ಮುಂದೆಯೂ ಕೆಟ್ಟ ಬೇಡಿಕೆ ಇಡಲಾಗಿತ್ತು. ಆದ್ರೆ ನನ್ನನ್ನು ನಾನು ಸಂಭಾಳಿಸಿಕೊಂಡೆ. ಇದೇ ಕಾರಣಕ್ಕೆ ಕೆಲ ಪ್ರಾಜೆಕ್ಟ್ ಬಿಟ್ಟೆ. ಘಟನೆ ನಡೆದಾಗ ನಾನು ದಿಗ್ಬ್ರಮೆಗೊಂಡಿದ್ದೆ. ಜನರು ಹೇಗೆಲ್ಲ ವ್ಯವಹರಿಸಲು ಹೇಗೆ ಸಾಧ್ಯ ಎನ್ನಿಸಿತ್ತು. ಆ ದಿನ ಅಸಮಾಧಾನಗೊಂಡು ತುಂಬಾ ಅತ್ತಿದ್ದೇನೆ ಎಂದು ಅದಿತಿ ಹೇಳಿದ್ದಾಳೆ.

ಈ ಘಟನೆ ನಂತ್ರ ಸುಮಾರು 8 ತಿಂಗಳುಗಳ ಕಾಲ ನನಗೆ ಕೆಲಸ ಸಿಗಲಿಲ್ಲ. 2013 ತುಂಬಾ ಕಠಿಣ ವರ್ಷವಾಗಿತ್ತು. ನನ್ನ ತಂದೆಯನ್ನು ನಾನು ಕಳೆದುಕೊಂಡಿದ್ದೆ. 2014 ರ ನಂತ್ರ ಪರಿಸ್ಥಿತಿ ನಿಧಾನವಾಗಿ ಬದಲಾಯ್ತು ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...