alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಷಯ್ ಚಿತ್ರ ‘ಪ್ಯಾಡ್ ಮ್ಯಾನ್’ ನೋಡಲಿದ್ದಾರೆ ಪಿಎಂ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಹಗಲು-ರಾತ್ರಿಯೆನ್ನದೆ ಚಿತ್ರಕ್ಕಾಗಿ ಅಕ್ಷಯ್ ಬೆವರಿಳಿಸುತ್ತಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಅಕ್ಷಯ್ ಕುಮಾರ್ ಭೇಟಿಯಾಗಲಿದ್ದಾರೆ.

ಸುಮಾರು 3 ಗಂಟೆಗಳ ಕಾಲವನ್ನು ಮೋದಿ ಅಕ್ಷಯ್ ಗಾಗಿ ತೆಗೆದಿಟ್ಟಿದ್ದಾರೆ. ಪಿಎಂ ಮೋದಿಗಾಗಿ ಅಕ್ಷಯ್ ಕುಮಾರ್ ಪ್ಯಾಡ್ ಮ್ಯಾನ್ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಿದ್ದಾರೆ. ಈ ವೇಳೆ ಚಿತ್ರದ ನಿರ್ಮಾಪಕ ಪ್ರೇರಣಾ ಅರೋರಾ ಹಾಗೂ ಟ್ವಿಂಕಲ್ ಖನ್ನಾ ಉಪಸ್ಥಿತರಿರಲಿದ್ದಾರೆ.

ಅಕ್ಷಯ್ ಮೋದಿ ಭೇಟಿಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಚಿತ್ರ ನೋಡಲು ಸ್ವತಃ ಮೋದಿಯವರೇ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಹಿಂದೆ ಟಾಯ್ಲೆಟ್ ಏಕ್ ಪ್ರೇಮ ಕಥಾ ಚಿತ್ರದ ಬಗ್ಗೆಯೂ ಮೋದಿ ಜೊತೆ ಅಕ್ಷಯ್ ಮಾತುಕತೆ ನಡೆಸಿದ್ದರು. ಫೆಬ್ರವರಿ 9ರಂದು ಪ್ಯಾಡ್ ಮ್ಯಾನ್ ಚಿತ್ರ ತೆರೆಗೆ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...