alex Certify
ಕನ್ನಡ ದುನಿಯಾ       Mobile App
       

Kannada Duniya

‘ಪದ್ಮಾವತ್ ಚಿತ್ರ ನಿಷೇಧಿಸಿ, ಇಲ್ಲವೇ ಸಾಯಲು ಅನುಮತಿ ಕೊಡಿ’

ಜನವರಿ 25ರಂದು ಪದ್ಮಾವತ್ ಚಿತ್ರವನ್ನು ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಜಸ್ತಾನದ ಚಿತ್ತೋರ್ ಗಢದಲ್ಲಿ 200ಕ್ಕೂ ಹೆಚ್ಚು ರಾಜ್ಪೂತ್ ಮಹಿಳೆಯರು ಬೀದಿಗಿಳಿದಿದ್ರು. ಕೈಯಲ್ಲಿ ಖಡ್ಗ ಹಿಡಿದು ಪ್ರತಿಭಟಿಸಿದ ಮಹಿಳೆಯರು, ಪದ್ಮಾವತ್ ಚಿತ್ರವನ್ನು ನಿಷೇಧಿಸುವಂತೆ ಪಟ್ಟು ಹಿಡಿದಿದ್ದಾರೆ.

ಪದ್ಮಾವತ್ ಚಿತ್ರವನ್ನು ಬ್ಯಾನ್ ಮಾಡಿ ಇಲ್ಲದೇ ಹೋದಲ್ಲಿ ನಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂತಾ ಮನವಿ ಮಾಡಿದ್ದಾರೆ. ಜೌಹರ್ ಕ್ಷತ್ರಾನಿ ಮಂಚ್, ಕರ್ಣಿ ಸೇನಾ, ಜೌಹಾರ್ ಸ್ಮೃತಿ ಸಂಸ್ಥಾನ್ ಸೇರಿ ವಿವಿಧ ಸಂಘಟನೆಗಳ ಸದಸ್ಯೆಯರು ಜಿಲ್ಲಾಧಿಕಾರಿ, ಪ್ರಧಾನಿ, ರಾಷ್ಟ್ರಪತಿಗಳು ಮತ್ತು ಗವರ್ನರ್ ಗೆ ಮೆಮೊರೆಂಡಮ್ ನೀಡಿದ್ದಾರೆ.

ದೇಶಾದ್ಯಂತ ಚಿತ್ರವನ್ನು ನಿಷೇಧಿಸಬೇಕು ಅನ್ನೋದು ಅವರ ಒತ್ತಾಯ. ಶಾಹಿದ್ ಕಪೂರ್, ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ಇದೇ ತಿಂಗಳ 25ರಂದು ಬಿಡುಗಡೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...