alex Certify
ಕನ್ನಡ ದುನಿಯಾ       Mobile App
       

Kannada Duniya

ಸೌತ್ ಸಿನಿ ದುನಿಯಾದ ಕುರಿತು ಜೂಹಿ ಹೇಳಿದ್ದೇನು…?

ಬಾಲಿವುಡ್ ನಲ್ಲಿ ಹಿರಿಯ ನಟಿಯಾಗಿ ಗುರುತಿಸಿಕೊಂಡಿರುವ ಜೂಹಿ ಚಾವ್ಲಾ, ದಕ್ಷಿಣ ಭಾರತದ ಚಿತ್ರರಂಗದ ಮೂಲಕವೇ ಮನೆ ಮಾತಾಗಿದ್ದು. ಈಗಲೂ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜೂಹಿ ಚಾವ್ಲಾ, ಅನಿಲ್ ಕಪೂರ್, ಮತ್ತವರ ಪುತ್ರಿ ಸೋನಂ ಕಪೂರ್ ಜೊತೆಗೆ ಬಾಲಿವುಡ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಮಾರಂಭವೊಂದಕ್ಕಾಗಿ ಹೈದರಾಬಾದ್ ಗೆ ಆಗಮಿಸಿದ್ದ ಜೂಹಿ ಚಾವ್ಲಾ, ದಕ್ಷಿಣ ಭಾರತ ಚಿತ್ರರಂಗದೊಂದಿಗಿನ ತಮ್ಮ ನಂಟಿನ ಕುರಿತು ಅನಿಸಿಕೆ ಹಂಚಿಕೊಂಡಿದ್ದಾರೆ. ತಮ್ಮ ಯಶಸ್ಸಿಗೆ ದಕ್ಷಿಣ ಭಾರತ ಚಿತ್ರರಂಗವೇ ಕಾರಣವೆಂದು ಹೇಳಿರುವ ಜೂಹಿ ಚಾವ್ಲಾ, ನನ್ನ ಹೃದಯದಲ್ಲಿ ಹೈದರಾಬಾದ್ ಗೆ ವಿಶೇಷ ಸ್ಥಾನಮಾನವಿದೆ ಎಂದು ಹೇಳಿಕೊಂಡಿದ್ದಾರೆ.

ತಾವು ಚಿತ್ರರಂಗಕ್ಕೆ ಕಾಲಿಟ್ಟಾಗ ಮಹಿಳೆಯರು ಬಲು ಕಡಿಮೆ ಸಂಖ್ಯೆಯಲ್ಲಿದ್ದರು. ಆದರೆ ಈಗ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ನಿಂತಿದ್ದಾರೆ ಎಂದಿರುವ ಜೂಹಿ ಚಾವ್ಲಾ, ತಮ್ಮ ಮುಂಬರುವ ‘ಏಕ್ ಲಡ್ಕಿ ಕೋ ಐಸಾ ಲಗಾ’ ಚಿತ್ರದ ಕುರಿತು ಮಾತನಾಡಿದ್ದು, ಸೋನಂ ಕಪೂರ್ ಳನ್ನು ತಾವು ಬಾಲ್ಯದಿಂದಲೂ ನೋಡಿದ್ದು, ಅನಿಲ್ ಕಪೂರ್ ಹೃದಯವಂತ ವ್ಯಕ್ತಿ. ಈಗ ತಂದೆ-ಮಗಳ ಜೊತೆ ಅಭಿನಯಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...