alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಸರ್ ಮೂಲಕ ಮತ್ತೊಮ್ಮೆ ಮೋಡಿ ಮಾಡಿದ್ದಾಳೆ ಕಣ್ಸನ್ನೆ ಹುಡುಗಿ

ಈಗ ಎಲ್ಲಾ ಕಡೆ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಈ ಕ್ಯೂಟ್ ನಟಿಯದ್ದೇ ಸುದ್ದಿ. ಒರು ಅಡರ್ ಲವ್ ಚಿತ್ರದ ಒಂದು ಹಾಡಿನ ಮೂಲಕ ಕೋಟ್ಯಂತರ ಮಂದಿಗೆ ಮೋಡಿ ಮಾಡಿದ್ದಾಳೆ ಈ ಮುಗ್ಧ ಚೆಲುವೆ. ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿ ಪ್ರಿಯಾಳ ಕಣ್ಸನ್ನೆಯನ್ನು ಯುವಕರಿಂದ ಮರೆಯೋಕೆ ಸಾಧ್ಯವಾಗ್ತಿಲ್ಲ.

ಇದೀಗ ಪ್ರಿಯಾ ನಟನೆಯ ಒರು ಅಡರ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಈ ಟೀಸರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸೋದ್ರಲ್ಲಿ ಅನುಮಾನವೇ ಇಲ್ಲ. ಆ ಹಾಡಿನಲ್ಲಿ ಗೆಳೆಯನಿಗೆ ಕಣ್ಣು ಹೊಡೆದಿದ್ದ ಪ್ರಿಯಾ, ಟೀಸರ್ ನಲ್ಲಿ ಹ್ಯಾಂಡ್ ಗನ್ ಮೂಲಕ ಸಿಹಿ ಮುತ್ತು ಕಳಿಸಿಕೊಟ್ಟಿದ್ದಾಳೆ.

ಹಾಗಾಗಿ 44 ಸೆಕೆಂಡ್ ಗಳ ಈ ವಿಡಿಯೋ ಕೂಡ ವೈರಲ್ ಆಗಬಹುದು. ಮಾಣಿಕ್ಯ ಮಲರಯ ಹಾಡಿನಿಂದಾಗಿ ಓವರ್ ನೈಟ್ ಸ್ಟಾರ್ ಆಗಿಬಿಟ್ಟಿದ್ದಾಳೆ ಪ್ರಿಯಾ. ಜಾಲತಾಣಗಳಲ್ಲಿ ದಿಢೀರನೆ ಲಕ್ಷ ಲಕ್ಷ ಫಾಲೋವರ್ ಗಳನ್ನು ಸಂಪಾದಿಸಿದ್ದಾಳೆ. ಸನ್ನಿ ಲಿಯೋನ್ ಳಂತಹ ಹಾಟ್ ನಟಿಯನ್ನೇ ಹಿಂದಿಕ್ಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...