alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿದೆ ‘ಬಾಹುಬಲಿ’ ಪ್ರಭಾಸ್ ಪೋಸ್ಟ್

ಬಾಹುಬಲಿ ಚಿತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿರುವ ತೆಲುಗು ನಟ ಪ್ರಭಾಸ್, ಯಾವಾಗಲೂ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾ ಬಂದಿದ್ದಾರೆ.

ಕಳೆದ ವರ್ಷ ತಮ್ಮ ಹೊಸ ಚಿತ್ರ ಸಾಹೋದ ಫಸ್ಟ್ ಲುಕ್ ಅನಾವರಣಗೊಳಿಸಿದ್ದರು. ಇದೀಗ ಮತ್ತೆ ಅಕ್ಟೋಬರ್ 23 ಬರುತ್ತಿದೆ, ಪ್ರಭಾಸ್ ಹೊಸ ಪ್ಲಾನ್‌ನೊಂದಿಗೆ ಸಿದ್ಧವಾಗಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆ ಮೂಲಕ ಪ್ರಭಾಸ್ ಅವರು ದಸರಾದ ಶುಭಾಶಯ ಕೋರಿದ್ದಾರೆ. ಜತೆಗೆ ಬರ್ತ್‌ಡೇ ದಿನ ನಿಮಗೊಂದು ಸರ್ಪ್ರೈಸ್ ಕಾದಿದೆ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಪ್ರಭಾಸ್ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಕಾತರ ಹುಟ್ಟಿಹಾಕಿದೆ. ಏನಿರಬಹುದು ಪ್ರಭಾಸ್ ಅವರ ಹೊಸ ಘೋಷಣೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

2016ರಲ್ಲೂ ತಮ್ಮ ಬಾಹುಬಲಿ ಸರಣಿಯ 2ನೇ ಚಿತ್ರದ ಪ್ರಥಮ ಪೋಸ್ಟರ್ ಅನ್ನು ಬಹಿರಂಗಪಡಿಸಲು ಬರ್ತ್‌ಡೇ ದಿನವನ್ನೇ ಆರಿಸಿಕೊಂಡಿದ್ದರು ಪ್ರಭಾಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...