alex Certify
ಕನ್ನಡ ದುನಿಯಾ       Mobile App
       

Kannada Duniya

ಸುಶ್ಮಿತಾ ಸೇನ್ ಬರ್ತಡೇಗೆ ಫಸ್ಟ್ ವಿಶ್ ಯಾರದ್ದು ಗೊತ್ತಾ?

ನವೆಂಬರ್ 19 ರ ಭಾನುವಾರ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹುಟ್ಟುಹಬ್ಬ. ಈ ಬಾರಿ ಆಕೆಯ ಅಭಿಮಾನಿಗಳಿಗೊಂದು ಸರ್ ಪ್ರೈಸ್ ಕಾದಿತ್ತು. ಕಾರಣ ಆಕೆಗೆ ಫಸ್ಟ್ ವಿಶ್ ಮಾಡಿದ್ದು ಆಕೆಯ ಬಾಯ್ ಫ್ರೆಂಡ್ ಎಂದು ಊಹಿಸಲಾಗಿರುವ ರೋಹ್ಮನ್ ಶಾಲ್!

ಸುಂದರ ಸಂಜೆಯಲ್ಲಿ ಟೆರೇಸ್ ನಲ್ಲಿ ನಿಂತು ಆತ ಸುಶ್ಮಿತಾ ಸೇನ್ ಹಣೆಗೆ ಮುತ್ತಿಕ್ಕುತ್ತಿರುವ ದೃಶ್ಯ ಇನ್ ಸ್ಟಾ ಗ್ರಾಂನಲ್ಲಿ ಹರಿಯಬಿಟ್ಟಿರುವುದು ಈತನೇ ಆಕೆಯ ಬಾಯ್ ಫ್ರೆಂಡ್ ಎಂಬ ಅಭಿಮಾನಿಗಳ ಊಹೆ ಬಲಗೊಳ್ಳಲು ಕಾರಣವಾಗಿದೆ.

ಮಾತ್ರವಲ್ಲ ಅದಕ್ಕೊಂದು ಸುಂದರವಾದ ಕ್ಯಾಪ್ಶನ್ ಅನ್ನೂ ಬರೆದಿದ್ದಾನೆ. ”ಹೇ…. ನೋಡು ಯಾರ ಬರ್ತ್ ಡೇ ಇಂದು ಎಂದು. ಹ್ಯಾಪಿ ಬರ್ತ್ ಡೇ ಜಾನ್. ನಿನಗೆ ಕೆಲವೊಂದು ಮಾತುಗಳನ್ನು ಹೇಳಬಲ್ಲ ವ್ಯಕ್ತಿ ನಾನೆಂಬುದು ನನಗೆ ಗೊತ್ತು. ಹಾಗಾಗಿ ಆ ಚಂದದ ಮಾತುಗಳನ್ನು ನಾನೇ ಹೇಳುತ್ತೇನೆ. ಇದು ನಿನ್ನ ಜೀವನದ ಅತ್ಯಂತ ಸುಂದರ ದಿನ. ನಿನ್ನ ಮುಂದಿನ ದಿನಗಳೂ ಇಷ್ಟೇ ಸುಂದರವಾಗಿರಲಿ. ಎಂದಿಂದಿಗೂ ನಿನ್ನ ಪ್ರೀತಿಸುವೆ” ಎಂದಿದ್ದಾನೆ. ಎಷ್ಟೊಂದು ಸುಂದರ ಟ್ವೀಟ್. ಈ ಹಿಂದಿನಿಂದಲೂ ಆತನೇ ಸುಶ್ಮಿತಾ ಪ್ರಿಯಕರನಿರಬಹುದೆಂಬ ಸಂದೇಹಗಳಿದ್ದವು. ಇದೀಗ ಪಕ್ಕಾ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...