alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ಮತ್ತಷ್ಟು ವಿಳಂಬ?

ನಟಿ ಶ್ರೀದೇವಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅಂತಾ ದುಬೈ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಫೆಬ್ರವರಿ 24ರಂದೇ ಶ್ರೀದೇವಿ ಕೊನೆಯುಸಿರೆಳೆದಿದ್ದಾರೆ, ಆದ್ರೆ ಇದುವರೆಗೂ ಮೃತದೇಹ ಭಾರತಕ್ಕೆ ಬಂದಿಲ್ಲ.

ಇನ್ನೊಂದು ಕ್ಲಿಯರೆನ್ಸ್ ಸಿಗಬೇಕಿದೆ, ಅದು ಸಿಕ್ಕಮೇಲಷ್ಟೆ ಶ್ರೀದೇವಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಅಂತಾ ದುಬೈ ಪೊಲೀಸರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಇಂದು ಮೃತದೇಹ ಭಾರತಕ್ಕೆ ಬರುವ ಸಾಧ್ಯತೆ ಇದೆ.

ದುಬೈ ಅಧಿಕಾರಿಗಳಿಂದ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಶ್ರೀದೇವಿ ಮೃತದೇಹವನ್ನು ಭಾರತಕ್ಕೆ ಕಳಿಸಿಕೊಡಲಾಗುವುದು ಅಂತಾ ದುಬೈನಲ್ಲಿರೋ ಭಾರತದ ರಾಯಭಾರಿ ನವದೀಪ್ ಸೂರಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಗಿಯಲು 2-3 ದಿನಗಳು ಬೇಕಾಗುತ್ತವೆ ಅಂತಾ ಹೇಳಿದ್ದಾರೆ.

ಶ್ರೀದೇವಿ ಅವರ ಹಠಾತ್ ನಿಧನದಿಂದ ಎಲ್ಲರಿಗೂ ಆಘಾತವಾಗಿರುವುದು ನಿಜ, ಆದ್ರೆ ಈ ಬಗ್ಗೆ ಅನಾವಶ್ಯಕ ಊಹಾಪೋಹಗಳನ್ನು ಸೃಷ್ಟಿಸುವುದು ಬೇಡ. ಸಾವಿನ ನಿಖರ ಕಾರಣವನ್ನು ತಜ್ಞರು ಪತ್ತೆ ಮಾಡುತ್ತಾರೆ ಅಂತಾ ಸಲಹೆ ನೀಡಿದ್ದಾರೆ. ಶ್ರೀದೇವಿ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು.

ಆದ್ರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ಉಲ್ಲೇಖಿಸಲಾಗಿದೆ, ಶ್ರೀದೇವಿ ದೇಹದಲ್ಲಿ ಅಲ್ಕೋಹಾಲ್ ಅಂಶ ಪತ್ತೆಯಾಗಿದೆಯೆಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳ್ತಿದೆ. ಹಾಗಾಗಿ ಶ್ರೀದೇವಿ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...