alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ನಿಶ್ಚಿತಾರ್ಥ ಮಾಡಿಕೊಂಡ್ರೆ ಕಂಗನಾಗೆ ಯಾಕೆ ಕೋಪ?

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ ಸಾಕಷ್ಟು ಸದ್ದು ಮಾಡ್ತಿರುವ ಪ್ರಿಯಾಂಕ ಚೋಪ್ರಾ ಅಮೆರಿಕಾ ಹಾಡುಗಾರ ನಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೆ ಈ ಸುದ್ದಿ ಹರಡಿದೆ. ನಿಕ್-ಪ್ರಿಯಾಂಕ ಮದುವೆ ಯಾವಾಗ ಎಂಬ ಪ್ರಶ್ನೆ ಹರಿದಾಡ್ತಿದೆ.

ಈ ಎಲ್ಲದರ ಮಧ್ಯೆ ಬಾಲಿವುಡ್ ನಟಿ ಕಂಗನಾ, ಪ್ರಿಯಾಂಕ-ನಿಕ್ ನಿಶ್ಚಿತಾರ್ಥದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಂಗನಾರಿಗೆ ಪ್ರಿಯಾಂಕ ಎಂಗೇಜ್ಮೆಂಟ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಏನು ಪ್ರಿಯಾಂಕ ನಿಶ್ಚಿತಾರ್ಥವಾಯ್ತಾ? ಒಂದು ವೇಳೆ ಹೌದಾದ್ರೆ ಇಷ್ಟು ಒಳ್ಳೆ ಸ್ನೇಹಿತರಾಗಿ ಪ್ರಿಯಾಂಕ ನನಗೆ ಈ ವಿಷ್ಯ ಹೇಳಲಿಲ್ಲ ಎನ್ನುವ ಕಾರಣಕ್ಕೆ ನಾನು ಪ್ರಿಯಾಂಕ ಮೇಲೆ ಕೋಪಗೊಳ್ಳೋದು ನಿಶ್ಚಿತ ಎಂದಿದ್ದಾಳೆ.

ಪ್ರಿಯಾಂಕ ಹಾಗೂ ಕಂಗನಾ ಫ್ಯಾಷನ್ ಹಾಗೂ ಕ್ರಿಶ್-2 ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಫ್ಯಾಷನ್ ಚಿತ್ರದ ಅಭಿನಯಕ್ಕಾಗಿ ಇಬ್ಬರಿಗೂ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...