alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಲ್ಮಾನ್‌’ ಹೆಸರಿನ ಮೇಕೆಗೆ ಸಿಕ್ತು 5 ಲಕ್ಷ ರೂಪಾಯಿ…!

ಬಕ್ರೀದ್ ಹಬ್ಬದ ಪ್ರಯುಕ್ತ ಮೇಕೆಗಳಿಗೆ ಭಾರಿ ಬೇಡಿಕೆ ಬಂದಿತ್ತು. ಲಕ್ಷಗಟ್ಟಲೆ ರೂ. ಗಳಿಗೆ ಮೇಕೆ ಮಾರಾಟವಾಗಿದ್ದು, ಉತ್ತರ ಪ್ರದೇಶದ ಗೋರಖ್‌ ಪುರದಲ್ಲಿ ಸಲ್ಮಾನ್ ಹೆಸರಿನ ಮೇಕೆ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಸಲ್ಮಾನ್ ಅಭಿನಯದ ‘ರೇಸ್‌-3’ ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡದೇ ಇದ್ದರೂ, ಸಲ್ಲು ಅಭಿಮಾನಿಯೊಬ್ಬರು ತಮ್ಮ ಮೇಕೆಗೆ ಸಲ್ಮಾನ್ ಹೆಸರಿಟ್ಟಿದ್ದು, ಈ ಮೇಕೆ ಈಗ ಭಾರೀ ಬೆಲೆಗೆ ಮಾರಾಟವಾಗಿದೆ.

ತ್ಯಾಗದ ಸಂಕೇತವಾಗಿ ಮುಸಲ್ಮಾನರು ಆಚರಿಸುವ ಬಕ್ರೀದ್ ಹಬ್ಬದಂದು ಮೇಕೆಯನ್ನು ಬಲಿ ನೀಡುವುದು ಆಚರಣೆ. ಈ ವೇಳೆ ಮೇಕೆಗಳಿಗೆ ಬಲು ಬೇಡಿಕೆ ಇರುವುದು ಸಾಮಾನ್ಯ. ಹೀಗಾಗಿ ಸಲ್ಮಾನ್ ಹೆಸರಿನ ಮೇಕೆ ಬರೋಬ್ಬರಿ 5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...